ಮಡಿಕೇರಿ, ಜ. 31: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಕೆ.ಬಿ. ಮಹಂತೇಶ್ ಜ್ಞಾಪಕಾರ್ಥ ನೀಡುವ 2017ನೇ ಸಾಲಿನ ಅತ್ಯುತ್ತಮ ಪರಿಣಾಮಕಾರಿ ವರದಿ ಪ್ರಶಸ್ತಿಗೆ ಶಕ್ತಿಪತ್ರಿಕೆಯಲ್ಲಿ ಪ್ರಕಟವಾದ ಐಮಂಡ ಗೋಪಾಲ್ ಸೋಮಯ್ಯ ಬರೆದ ವರದಿ ಆಯ್ಕೆಯಾಗಿದೆ.30.12.2017 ರಂದು ಭಾಗಮಂಡಲದ ಭಗಂಡೇಶ್ವರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಕಟವಾದ ಪ್ರವಾಸಿಗರ ಎಂಜಲು ನೀರಿನಲ್ಲಿ ಭಕ್ತಾದಿಗಳ ಪುಣ್ಯ ಸ್ನಾನ...! ವರದಿ ಆಯ್ಕೆಯಾಗಿದೆ. ತಾ. 10 ರಂದು ಪತ್ರಿಕಾ ಭವನದಲ್ಲಿ ನಡೆಯುವ ಪ್ರೆಸ್ ಕ್ಲಬ್ ಡೇ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯೊಂದಿಗೆ 5 ಸಾವಿರ ರೂ. ನಗದು ಬಹುಮಾನ ನೀಡಲಾಗುವದೆಂದು ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.