ಶ್ರೀಮಂಗಲ, ಜ. 29: ಈ ಹಿಂದಿನ ಅಧಿಕಾರ ಹಂಚಿಕೆಯ ಒಪ್ಪಂದದಂತೆ, ಮುಂದಿನ 30 ತಿಂಗಳ ಅವಧಿಗೆ ಶ್ರೀಮಂಗಲ ಗ್ರಾ.ಪಂ.ನ ನೂತನ ಅಧ್ಯಕ್ಷರಾಗಿ ಚೋಕಿರ ಕಲ್ಪನಾ ತಿಮ್ಮಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗ್ರಾ.ಪಂ ಸಭಾಂಗಣದಲ್ಲಿ ನಡೆದ ಅಧ್ಯಕ್ಷರ ಆಯ್ಕೆ ಸಭೆಯಲ್ಲಿ ಚುನಾವಣಾಧಿಕಾರಿ ವೀರಾಜಪೇಟೆÉ ತಾಲೂಕು ತಹಶೀಲ್ದಾರ್ ಗೋವಿಂದರಾಜು ಉಪಸ್ಥಿತಿಯಲ್ಲಿ ಆಯ್ಕೆ ನಡೆಯಿತು. ಈ ಹಿಂದಿನ ಅಧ್ಯಕ್ಷೆ ಅಜ್ಜಮಾಡ ಮುತ್ತಮ್ಮ ನಾಚಪ್ಪ ಅಧಿಕಾರವನ್ನು ನೂತನ ಅಧ್ಯಕ್ಷೆಗೆ ಹಸ್ತಾಂತರಿಸಿದರು.

ನೂತನ ಅಧ್ಯಕ್ಷೆ ಕಲ್ಪನಾ ತಿಮ್ಮಯ್ಯ ಮಾತನಾಡಿ ಎಲ್ಲಾ ಗ್ರಾ.ಪಂ ಸದಸ್ಯರ ಸಹಕಾರದಿಂದ ಗ್ರಾ.ಪಂ ವ್ಯಾಪ್ತಿಯಲ್ಲಿ ಲಭ್ಯವಿರುವ ಅನುದಾನದಲ್ಲಿ ಪ್ರಾಮಾಣಿಕ ಕೆಲಸ ಮಾಡುವದಾಗಿ ಹೇಳಿದರು. ನಿರ್ಗಮಿತ ಅಧ್ಯಕ್ಷೆ ತಮ್ಮ ಅನಿಸಿಕೆ ಹಂಚಿಕೊಂಡರು.

ಈ ಸಂದರ್ಭ ಗ್ರಾ.ಪಂ ಉಪಾಧ್ಯಕ್ಷ ಕಳ್ಳಂಗಡ ರಜಿತ್ ಪೂವಣ್ಣ, ಗ್ರಾ.ಪಂ ಸದಸ್ಯರಾದ ಅಜ್ಜಮಾಡ ಜಯ, ಅಜ್ಜಮಾಡ ರೇಣು, ಚೋನಿರ ಜೆ.ಕಾಳಯ್ಯ, ಅಮ್ಮಣ, ಕಾಳಿ, ಮಂಜು, ಎಸ್.ಚಂದ್ರ, ಹೆಚ್.ಕೆ.ಮಲ್ಲಿಗೆ, ಪಿಡಿಓ ಪಿ.ಎಸ್.ಸತೀಶ್, ಬಿಜೆಪಿ ಸ್ಥಾನಿಯ ಸಮಿತಿಯ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ, ಮಾಜಿ ಅಧ್ಯಕ್ಷ ಕಳ್ಳಂಗಡ ಬೆಳ್ಯಪ್ಪ, ಶ್ರೀಮಂಗಲ ಕಂದಾಯ ಪರಿವೀಕ್ಷಕ ದೇವಯ್ಯ ಮತ್ತಿತರರು ಹಾಜರಿದ್ದರು.