*ಗೋಣಿಕೊಪ್ಪಲು, ಜ. 29: ಛತ್ತೀಸ್‍ಗಢ್‍ದಲ್ಲಿ ನಡೆದ 63ನೇ ರಾಷ್ಟ್ರೀಯ ಚೋಕ್‍ಬಾಲ್ ಕ್ರೀಡಾಕೂಟ ಮತ್ತು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ 12ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಚಿನ್ನ ಹಾಗೂ ಬೆಳ್ಳಿ ಪದಕಗಳಿಸಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ದರ್ಶಿನಿ, ಪ್ರಿಯಾಂಕ, ಗಾನ ವಿ.ಎಸ್, ಅಶ್ವಿನಿ, ದೇಚಮ್ಮ, ಪ್ರೇಕ್ಷ ತಂಗಮ್ಮ, ಅಲ್ಮಾಸ್, ಪೂವಮ್ಮ, ಅಬಿತ, ಐಶ್ವರ್ಯ, ರಶ್ವಿತ ಚಿನ್ನದ ಪದಕ ಗಳಿಸಿದ್ದಾರೆ,

ಬಾಲಕರ ವಿಭಾಗದಲ್ಲಿ ನಾಣಯ್ಯ, ಲವಿನ್ ಅಯ್ಯಪ್ಪ, ಬೋಪಣ್ಣ ಕೆ.ಕೆ, ಸೋಮಣ್ಣ, ರಾಮು ವೈ.ಎನ್, ಲಿಖಿತ್, ರೋಹಿತ್ ಮತ್ತು ಹನೀಷ್ ಬೆಳ್ಳಿ ಪದಕಗಳಿಸಿದ್ದಾರೆ ಎಂದು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರತನ್ ಮಾದಯ್ಯ ತಿಳಿಸಿದ್ದಾರೆ. ದೈಹಿಕ ಶಿಕ್ಷಕ ಸಂತೋಷ್ ಎಂ.ಟಿ. ತರಬೇತಿ ನೀಡಿದ್ದಾರೆ.