ಗೋಣಿಕೊಪ್ಪ ವರದಿ, ಜ. 29 : ಹಾಕಿ ಇಂಡಿಯಾ ಸಹಯೋಗದಲ್ಲಿ ರಾಂಚಿಯಲ್ಲಿ ನಡೆಯಲಿರುವ 8 ನೇ ರಾಷ್ಟ್ರೀಯ ಮಹಿಳಾ ಹಾಕಿ ಟೂರ್ನಿಯಲ್ಲಿ ಹಾಕಿಕೂರ್ಗ್ ತಂಡ ಪಾಲ್ಗೊಳ್ಳಲಿದೆ. ಈಗಾಗಲೇ ಪ್ರಯಾಣ ಬೆಳೆಸಿರುವ ತಂಡದಲ್ಲಿ 18 ಆಟಗಾರರಿದ್ದಾರೆ.

ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ತಂಡದ ಆಯ್ಕೆ ಮತ್ತು ತರಬೇತಿ ನಡೆಯಿತು. ಕುಮುದಾ, ಪ್ರೇಮ, ಮಂಜುಳ, ನಿವೇದಿತಾ, ಅಂಜಲಿ, ಕಾದಂಬರಿ, ಕವನ, ಹರಿಣಾಕ್ಷಿ, ಟೀನಾ, ರಂಜಿತಾ, ಅಭಿನಾಶ್ರೀ, ಚಿತ್ರಶ್ರೀ, ಸುಮನ್, ದ್ರುತಿ, ಮಿಲನಾ, ದೇವಿ, ಅವಿನಾಶ್ರೀ ಮತ್ತು ಪೂಜಿತಾ ತಂಡದಲ್ಲಿದ್ದಾರೆ.