ಸೋಮವಾರಪೇಟೆ, ಜ.29 : ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾ. 30 ರಂದು (ಇಂದು) ಅಪರಾಹ್ನ 3 ಗಂಟೆಗೆ ಇಲ್ಲಿನ ಪತ್ರಿಕಾಭವನದಲ್ಲಿ ಸಾಧಕರಿಗೆ ಸನ್ಮಾನ, ರಂಗೋಲಿ ಮತ್ತು ಗೀತಗಾಯನ ಸ್ಪರ್ಧೆ, ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಮಕ್ಕಳಿಗೆ ಅಭಿನಂದನಾ ಸಮಾರಂಭ ನಡೆಯಲಿದೆ.
ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಡಿವೈಎಸ್‍ಪಿ ಕೆ.ಇ. ಮುರುಳೀಧರ್ ಉದ್ಘಾಟಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ರಾಜ್ಯ ಹಜ್ ಸಮಿತಿ ಸದಸ್ಯ ಅಬೂಬಕರ್ ಸಿದ್ದೀಕ್ ಮೊಂಟುಗೋಳಿ, ವಲಯ ಅರಣ್ಯಾಧಿಕಾರಿ ಎನ್. ಲಕ್ಷ್ಮೀಕಾಂತ್, ಪ್ರಾಧ್ಯಾಪಕ ಶ್ರೀಧರ್, ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ಮಾಜೀ ಸೈನಿಕರುಗಳಾದ ಬಿ.ಪಿ. ಅರವಿಂದ ಬಾಬು, ಥೋಮಸ್ ವಾಸ್, ಪೊಲೀಸ್ ಇಲಾಖೆಯ ಎನ್.ಎಂ. ಧರ್ಮಪ್ಪ, ಶಿಕ್ಷಣ ಕ್ಷೇತ್ರದಿಂದ ಪೃಥ್ವಿ, ಪತ್ರಿಕೋದ್ಯಮ ಕ್ಷೇತ್ರದಿಂದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕನ್ನಡ ಸೇವೆಗಾಗಿ ಬಿ.ಎಸ್. ಲೋಕೇಶ್ ಸಾಗರ್, ಸಮಾಜ ಸೇವೆಗಾಗಿ ಜೀಪ್ ಮಂಜುನಾಥ್ ಅವರುಗಳನ್ನು ಸನ್ಮಾನಿಸಲಾಗುವದು ಎಂದು ಪ್ರಕಟಣೆ ತಿಳಿಸಿದೆ.