ಚೆಟ್ಟಳ್ಳಿ, ಜ. 29: ಯುವಶಕ್ತಿಯೇ ದೇಶದ ಬಹುದೊಡ್ಡ ಆಸ್ತಿ.ಸ್ವಾಮಿ ವಿವೇಕಾನಂದರು ಹೇಳಿರುವಂತೆ ಯುವ ಶಕ್ತಿಗೆ ದೇಶದ ವ್ಯವಸ್ಥೆಯನ್ನೇ ಬದಲಿಸುವ ಶಕ್ತಿಯಿದೆ ಎಂದು ಚೆಟ್ಟಳ್ಳಿಯಲ್ಲಿ ನಡೆದ ಎನ್‍ಎಸ್‍ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಾಸಕ ಕೆ.ಜಿ ಬೋಪಯ್ಯ ನುಡಿದರು.

ತಾ. 28ರಂದು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವೀರಾಜಪೇಟೆಯ ಕಾವೇರಿ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವನ್ನು ಶಾಸಕ ಕೆ.ಜಿ ಬೋಪಯ್ಯ ಹಾಗೂ ಅತಿಥಿಗಳು ದೀಪ ಬೆಳಗುವದರ ಮೂಲಕ ಉದ್ಘಾಟಿಸಿದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಸ್ವಾತಂತ್ರ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡರ ಜನುಮ ದಿನವನ್ನು ವಿಜೃಂಭಣೆಯಿಂದ ಆಚರಿಸು ವಂತಾಗಬೇಕೆಂದು ತಾಲೂಕು ಪಂಚಾಯಿತಿ ಸದಸ್ಯ ಹಾಗೂ ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಒತ್ತಾಯಿಸಿದರು. ಗೌಡ ಸಮಾಜ ಅಧ್ಯಕ್ಷ ಪೇರಿಯನ ಜಯಾನಂದ ಮಾತನಾಡಿ, ಶಾಲಾವ್ಯವಸ್ಥೆಯಲ್ಲಿ ಕುಂದುಕೊರತೆ ಯಾದಾಗ ಶಾಲಾಭಿವೃದ್ಧಿ ಸಮಿತಿಗಳ ಒಕ್ಕೂಟದಿಂದ ಹೋರಾಡಿದ್ದೇವೆ ಎಂದರು.

ಚೆಟ್ಟಳ್ಳಿ ಗ್ರಾಮಪಂಚಾಯಿತಿ ಸದಸ್ಯೆ ಹಾಗೂ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಮೇರಿ ಅಂಬುದಾಸ್ ಚೆಟ್ಟಳ್ಳಿ ಸಹಕಾರ ಸಂಘದ ಉಪಾಧ್ಯಕ್ಷ ತಿಮ್ಮಪ್ಪಯ್ಯ, ಪ್ರಾ.ಶಾಲೆ ಸಹಶಿಕ್ಷಕಿ ವಿಶಾಲಾಕ್ಷಿ ಹಾಗೂ ವಿದ್ಯಾರ್ಥಿಗಳು ಶಿಬಿರದ ಅನಿಸಿಕೆಯನ್ನು ಹಂಚಿಕೊಂಡರು.

ವೀರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ.ಎಂ. ನಾಚಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಿಬಿರಾರ್ಥಿ ಗಳು ಪ್ರಾರ್ಥಿಸಿ, ಶಿಬಿರದ ಯೋಜನಾಧಿಕಾರಿ ಎಂ.ಬಿ.ಕಾವೇರಿ ಸ್ವಾಗತಿಸಿ, ರಾಷ್ಟ್ರ ಸೇವಾ ಯೋಜನಾ ಗೀತೆಯನ್ನು ಶಿಬಿರಾರ್ಥಿಗಳು ಹಾಡಿದರು. ಶಿಬಿರಾರ್ಥಿ ವಿಶ್ಚಿತ, ಯೋಜನಾಧಿಕಾರಿ ಬಿ.ಯು. ಅಂಬಿಕ ವರದಿ ವಾಚಿಸಿದರು.

ಚೆಟ್ಟಳ್ಳಿ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಳ್ಳಂಡ ಎ. ಮಾಯಮ್ಮ. ಸಂಘದ ನಿರ್ದೇಶಕಿ ಕೊಂಗೇಟಿರ ವಾಣಿಕಾಳಪ್ಪ, ಪತ್ರಕರ್ತ ಪುತ್ತರಿರ ಕರುಣ್ ಕಾಳಯ್ಯ, ಶಾಲಾ ಶಿಕ್ಷಕ ವೃಂದ ಹಾಗೂ ಸಾರ್ವಜನಿಕರು ಹಾಜರಿದ್ದರು.