ಪೆÇನ್ನಂಪೇಟೆ, ಜ. 29: ಕಳೆದ ನಾಲ್ಕೂವರೆ ವರ್ಷದಿಂದ ಅಸ್ತಿತ್ವದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಸ್ತೆಗಳ ಅಭಿವೃದ್ದಿಗಾಗಿ ಅನುದಾನವನ್ನು ಬಿಡುಗಡೆಗೊಳಿಸಿದೆ. ಕೊಡಗಿನ ಬಹುತೇಕ ಗ್ರಾಮೀಣ ರಸ್ತೆಗಳು ಸುಧಾರಣೆಯಾಗಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡÀ ಹರೀಶ್ ಬೋಪಣ್ಣ ಹೇಳಿದರು.
ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವನೂರು - ಚಾಮುಂಡಿ ದೇವಸ್ಥಾನದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ಕೊಡಗಿನ ಗ್ರಾಮೀಣ ರಸ್ತೆಯ ಅಭಿವೃದ್ದಿಯ ಬೇಡಿಕೆಗೆ ಸ್ಪಂದಿಸಿರುವ ಮುಖ್ಯ ಮಂತ್ರಿಗಳು ತಮ್ಮ ವಿಶೇಷ ಪ್ಯಾಕೇಜ್‍ನ ಅಡಿಯಲ್ಲಿ ಮೊದಲ ರೂ. 50 ಕೋಟಿಯನ್ನು ಬಿಡುಗಡೆಗೊಳಿಸಿದ್ದಾರೆ. ಈ ಅನುದಾನದಲ್ಲಿ ಕೊಡಗಿನ ಬಹುತೇಕ ರಸ್ತೆಗಳನ್ನು ಅಭಿವೃದ್ದಿ ಪಡಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯತ್ ಸದಸ್ಯ ಬಿ.ಎನ್ ಪ್ರಥ್ಯು ಮಾತನಾಡಿ ಮುಖ್ಯಮಂತ್ರಿಗಳ ಮೊದಲ ಹಂತದ ವಿಶೇಷ ಪ್ಯಾಕೇಜ್‍ನಡಿ ಬಾಳೆಲೆ ಗ್ರಾ.ಪಂ.ಗೆ ರೂ. 57 ಲಕ್ಷ ಅನುದಾನ ರಸ್ತೆ ಅಭಿವೃದ್ದಿಗಾಗಿ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಮುಖ್ಯಮಂತ್ರಿಗಳ ಎರಡನೇ ಹಂತದ ವಿಶೇಷ ಪ್ಯಾಕೇಜ್‍ನಡಿ ಬಾಳೆಲೆ ಗ್ರಾ.ಪಂ. ವ್ಯಾಪ್ತಿಯ ರಸ್ತೆ ಉನ್ನತ್ತೀಕರಣಕ್ಕಾಗಿ ರೂ. 1 ಕೋಟಿ ಅನುದಾನ ಬಿಡುಗಡೆಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷೆ ಆದೇಂಗಡ ತಾರ ಅಯ್ಯಮ್ಮ, ಬಾಳೆಲೆ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಆದೇಂಗಡ ವಿನು ಉತ್ತಪ್ಪ, ಬಾಳೆಲೆ ಗ್ರಾ.ಪಂ. ಅಧ್ಯಕ್ಷೆ ಕಾಂಡೇರ ಕುಸುಮ, ಉಪಾಧ್ಯಕ್ಷ ಕೊಕ್ಕೇಂಗಡ ರಂಜನ್, ಸದಸ್ಯ ಪೆÇಡಮಾಡ ಸುಕೇಶ್, ಕೋದಂಡ ಸೋಮಣ್ಣ, ಪೆÇಡಮಾಡ ಸುಬ್ರಮಣಿ, ಪೆÇಡಮಾಡ ಮೋಹನ್, ಕೇಶವ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.