ನಾಪೋಕ್ಲು: ಕೊಟ್ಟಮುಡಿ ಮರ್ಕಝುಲ್ ಹಿದಾಯ ವಿದ್ಯಾಸಂಸ್ಥೆಯಲ್ಲಿ ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ನಡೆಸಿದ ರಾಜ್ಯಮಟ್ಟದ ಪ್ರತಿಭೋತ್ಸವದಲ್ಲಿ ಮರ್ಕಝುಲ್ ಹಿದಾಯದ ವಿದ್ಯಾರ್ಥಿಗಳು ವಿಜಯ ಸಾಧಿಸಿದ್ದಾರೆ. ಅಲ್ ಹಿದಾಯ ಕಾಲೇಜ್ ಆಫ್ ಇಸ್ಲಾಮಿಕ್ ಸೈನ್ಸ್‍ನ ವಿದ್ಯಾರ್ಥಿಗಳಾದ ಉಮರುಲ್ ಫಾರೂಕ್ (ರಸಪ್ರಶ್ನೆ ಮತ್ತು ಚರ್ಚಾ ಗೋಷ್ಠಿ), ಶರೀಫ್ (ಡಾಕ್ಯುಮೆಂಟರಿ), ಶಫೀಕ್ ಮತ್ತು ಜುನೈದ್ (ಇಶಾರ ಗ್ರೂಪ್ ರಸಪ್ರಶ್ನೆ) ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಉಮರುಲ್ ಫಾರೂಕ್ (ರಸಪ್ರಶ್ನೆ) ನಝೀರ್ (ಇಬಾರತ್ ವಾಚನ) ದ್ವಿತೀಯ ಮತ್ತು ನವಾಜ್ ಇಸ್ಮಾಯಿಲ್ (ಕನ್ನಡ ಪ್ರಬಂಧ) ಯೂನುಸ್ (ಕಿತಾಬ್ ಟೆಸ್ಟ್) ಮುಹಮ್ಮದ್ ಶಮೀರ್ (ಬುರ್ದಾ ಕಂಠ ಪಾಠ) ತೃತೀಯ ಸ್ಥಾನವನ್ನು ಅಲಂಕರಿಸಿದ್ದಾರೆ.