ಮಡಿಕೇರಿ, ಜ. 28: ದೇಶ ಕಂಡ ಅಪ್ರತಿಮ ವೀರಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರಿಗಿದ್ದ ಶಿಸ್ತು ಹಾಗೂ ಸಮಯ ಪಾಲನೆಯನ್ನು ಯುವ ಜನಾಂಗ ಮೈಗೂಡಿಸಿಕೊಂಡು ಭವ್ಯ ಭಾರತ ನಿರ್ಮಾಣಕ್ಕೆ ಮುಂದಾಗುವಂತೆ ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಕರೆ ನೀಡಿದ್ದಾರೆ. ಜಿಲ್ಲಾಡಳಿತ, ಜಿ.ಪಂ. ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಕೋಟೆ ಆವರಣ ದಲ್ಲಿ ನಡೆದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 119ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೆ.ಎಂ.ಕಾರ್ಯಪ್ಪ ಅವರು ಮಾನವೀಯ ಗುಣ ಹೊಂದಿದ್ದರು, ಸೇನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವರ ಬಗ್ಗೆ ಪೂಜನೀಯ ಸ್ಥಾನವಿದ್ದು, ಭಾರತೀಯ ಸೇನೆಯನ್ನು ಬಲಪಡಿಸಲು ಶ್ರಮಿಸಿದ್ದರು ಎಂದು ಕಾರ್ಯಪ್ಪ ಅವರ ಪುತ್ರ ಕೆ.ಸಿ. ಕಾರ್ಯಪ್ಪ ಸ್ಮರಿಸಿದರು.

ನಾವುಗಳೆಲ್ಲರೂ ಭಾರತೀಯರಾಗಿ ಬದುಕುವಂತಾಗಬೇಕು. ಇದರಿಂದ ಉತ್ತಮ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದು ಅವರು ನುಡಿದರು.

ಬಿಕ್ಷೆ ಅಗತ್ಯವಿಲ್ಲ: ಯಂ.ಸಿ.ಎನ್.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಾಜಿ ಸಚಿವ ಯಂ.ಸಿ.ನಾಣಯ್ಯ ಮಾತನಾಡಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಪ್ರಪಂಚಕ್ಕೆ ರತ್ನವಾಗಿದ್ದು, ಅವರಿಗೆ ಭಾರತ ರತ್ನ ನೀಡಿ ಎಂದು ಬಿಕ್ಷೆ ಬೇಡುವ ಅಗತ್ಯವಿಲ್ಲ ಎಂದು ಮಾರ್ಮಿಕ ನುಡಿಯಾಡಿದರು.

ತಾವು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವನಾಗಿದ್ದ ಅವಧಿಯಲ್ಲಿ ಸಚಿವ ಸಂಪುಟದಲ್ಲಿ ಅನುಮೋದಿಸಿ ಕೆ.ಎಂ. ಕಾರ್ಯಪ್ಪ ಅವರಿಗೆ ಭಾರತ ರತ್ನ ನೀಡಬೇಕೆಂದು ಶಿಫಾರಸು ಮಾಡಲಾಗಿತ್ತು. ಆದರೆ ಇದುವರೆಗೂ ಆಗಿಲ್ಲ, ಇನ್ನೂ ಎಷ್ಟು ದಿನ ಅಂತ ಬೇಡುವದು ಎಂದು ಎಂ.ಸಿ.ನಾಣಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ರಾಷ್ಟ್ರದ ಸೈನ್ಯದಲ್ಲಿ ಶಿಸ್ತನ್ನು ಸ್ಥಾಪಿಸಿದ ಫೀಲ್ಡ್ ಮಾರ್ಷಲ್ ಭಾರತೀಯ ಸೇನೆಯ ಪಿತಾಮಹಾ ಆಗಿದ್ದು, ಸೇನೆ ಕಟ್ಟುವಲ್ಲಿ ತಮ್ಮದೇ ಆದ ಪಾತ್ರ ವಹಿಸಿದ್ದಾರೆ ಎಂದು ಸ್ಮರಿಸಿದರು.

ಕಾರ್ಯಪ್ಪ ಅವರು ಬದುಕಿನು ದ್ದಕ್ಕೂ ಶಿಸ್ತನ್ನು ಮೈಗೂಡಿಸಿಕೊಂಡಿ ದ್ದರು, ಅವರ ಸಮಯಪ್ರಜ್ಞೆಯನ್ನು ಯುವ ಜನರು ಅಳವಡಿಸಿಕೊಳ್ಳು ವಂತಾಗಬೇಕು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ದಿನಾಚರಣೆಯಲ್ಲಿ ಪಾಲ್ಗೊಳ್ಳುವದು ನಮ್ಮನ್ನು ನಾವು ಗೌರವಿಸಿಕೊಂಡಂತೆ ಎಂದು ಅವರು ಮಾರ್ನುಡಿದರು.

ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ

(ಮೊದಲ ಪುಟದಿಂದ) ಸಿ.ಕೆ.ಬೋಪಣ್ಣ ಅವರಿಗೆ ಸೂಚಿಸಿದ ಬೋಪಯ್ಯ ಪ್ರತಿಮೆಗಳ ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಗೆ ವಹಿಸುವದರ ಬದಲು ಪ್ರತ್ಯೇಕ ಫೋರಂ ರಚಿಸುವದು ಅಗತ್ಯ ಎಂದು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಫೋರಂ ಸಂಚಾಲಕ ಮೇಜರ್ ಬಿ.ಎ.ನಂಜಪ್ಪ ಮಾತನಾಡಿ ಕಾವೇರಿ ಕಾಲೇಜಿನ ಆವರಣದಲ್ಲಿ ನಿರ್ಮಾಣವಾಗಿರುವ ಪ್ರತಿಮೆಗಳ ನಿರ್ವಹಣಾ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿ ವಹಿಸಿಕೊಳ್ಳಬೇಕು. ಪ್ರತಿಮೆಗಳ ಮೇಲಿನ ಚಾವಣಿ ನಿರ್ಮಾಣಕ್ಕೆ ಅಂದಾಜು ರೂ.12 ಲಕ್ಷ ವೆಚ್ಚವಾಗಲಿದೆ. ಇದನ್ನು ಸರ್ಕಾರ ನೀಡಬೇಕು. ಪ್ರತಿವರ್ಷ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮಡಿಕೇರಿ ಮತ್ತು ಗೋಣಿಕೊಪ್ಪಲಿನಲ್ಲಿ ಕಾರ್ಯಪ್ಪ ಜಯಂತಿ ನಡೆಯುವಂತಾಗಬೇಕು ಎಂದು ಒತ್ತಾಯಿಸಿದರು.

ಕಾರ್ಯಪ್ಪ ಅವರ ಜೀವನ ಚರಿತ್ರೆ ಕುರಿತು ಮಾತನಾಡಿದ ನಿವೃತ್ತ ಪ್ರಾಂಶುಪಾಲ ಪ್ರೊ.ಇಟ್ಟೀರ ಬಿದ್ದಪ್ಪ ಕಾರ್ಯಪ್ಪ ಅವರ ಜೀವನ ಸಾಧನೆಯನ್ನು ಅರಿತುಕೊಳ್ಳಲು ಉಪನ್ಯಾಸ ಹಾಗೂ ಚರ್ಚಾಗೋಷ್ಠಿಗಳು ನಡೆಯಬೇಕು ಎಂದರು.

ಸಿಪಿಐ ದಿವಾಕರ್ ಮಾತನಾಡಿ ಕಾರ್ಯಪ್ಪ ಅವರು ಒಮ್ಮೆ ಅನಾರಾಗ್ಯ ನಿಮಿತ್ತ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆಗಲೂ ಅವರು ತಮ್ಮ ಸಮವಸ್ತ್ರ ತೆಗೆದಿರಲಿಲ್ಲ. ಅವರನ್ನು ನೋಡಲು ಅಂದಿನ ರಕ್ಷಣಾ ಸಚಿವರು ಆಸ್ಪತ್ರೆಗೆ ಬಂದಿದ್ದಾಗ ಅವರಿಗೆ ಎದ್ದುನಿಂತು ಸೆಲ್ಯೂಟ್ ಹೊಡೆದು ಗೌರವಿಸಿದರು. ಅಂತಹ ಮೇರು ವ್ಯಕಿತ್ವ ಅವರದು ಎಂದು ಗುಣಗಾನ ಮಾಡಿದರು.

ತಹಶೀಲ್ದಾರ್ ಆರ್.ಗೋವಿಂದರಾಜು, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ.ಬೋಪಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೆಲ್ವಿ, ಆರ್‍ಎಸ್‍ಎಸ್ ಮುಖಂಡ ಅವಿನಾಶ್, ಕೊಡಂದೇರ ಕುಟುಂಬದ ಅಧ್ಯಕ್ಷ ಸುಬ್ಬಯ್ಯ, ವೀರಾಜಪೇಟೆ ಪ.ಪಂ. ಅಧ್ಯಕ್ಷ ಇ.ಸಿ. ಜೀವನ್, ಕಬ್ಬಚ್ಚೀರ ಪ್ರಭು ಸುಬ್ರಮಣಿ, ಲೋಹಿತ್ ಭೀಮಯ್ಯ, ಟಿ.ಬಿ.ಜೀವನ್, ಗಿರೀಶ್ ಗಣಪತಿ ಮತ್ತಿತರ ಪ್ರಮುಖರು ಇದ್ದರು.

ತಾಲೂಕಿನ ಶಾಲಾ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಬೆಳಿಗ್ಗೆ 9.30 ಗಂಟೆಗೆ ಸ್ಥಳೀಯ ಬಸ್ ನಿಲ್ದಾಣದಿಂದ ಶಿಸ್ತುಬದ್ಧ ಮೆರವಣಿಗೆ ನಡೆಸಿದರು. ಜಯಂತಿ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರಗೀತೆ ಸ್ಪರ್ಧೆಯ ಪ್ರಾಥಮಿಕ ವಿಭಾಗದಲ್ಲಿ ಗೋಣಿಕೊಪ್ಪಲಿನ ಲಯನ್ಸ್ ಶಾಲೆ ಪ್ರಥಮ, ಅರುವತ್ತೊಕ್ಕಲಿನ ಸರ್ವದೈವತಾ ಶಾಲೆ ದ್ವಿತೀಯ ಅಮ್ಮತ್ತಿ ಸರ್ಕಾರಿ ಪ್ರಾಥಮಿಕ ಶಾಲೆ ತೃತೀಯ ಸ್ಥಾನ ಪಡೆದುಕೊಂಡಿತು.ಪ್ರೌಢಶಾಲೆ ವಿಭಾಗದಲ್ಲಿ ವೀರಾಜಪೇಟೆ ಅರಮೇರಿಯ ಎಸ್‍ಎಂಎಸ್ ಅಕಾಡೆಮಿ ಶಾಲೆ ಪ್ರಥಮ, ಪೊನ್ನಂಪೇಟೆ ಸೆಂಟ್ ಅಂಥೋಣಿ ಶಾಲೆ ದ್ವಿತೀಯ, ಗೋಣಿಕೊಪ್ಪಲಿನ ಲಯನ್ಸ್ ಶಾಲೆ ತೃತೀಯ ಸ್ಥಾನ ಪಡೆಯಿತು.ಕಾಲೇಜು ವಿಭಾಗದಲ್ಲಿ ಪೊನ್ನಂಪೇಟೆ ಸೇಂಟ್ ಅಂಥೋಣಿ ಪಿಯು ಕಾಲೇಜು ಪ್ರಥಮ ಸ್ಥಾನ ಪಡೆಯಿತು. - ವರದಿ ಎನ್. ಎನ್.ದಿನೇಶ್/ ಜಗದೀಶ್.