ಮಡಿಕೇರಿ, ಜ. 28: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರಥಮ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ ಜ.31 ರಂದು ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್‍ನ ಅಧ್ಯಕ್ಷರಾದ ಬಿ.ಎಸ್. ಲೋಕೇಶ್‍ಸಾಗರ್ ಇದೇ ಪ್ರಥಮ ಬಾರಿಗೆ ಕಸಾಪ ದ ವತಿಯಿಂದ ಮಕ್ಕಳಿಂದ ಮಕ್ಕಳಿಗಾಗಿ ನಡೆಯುತ್ತಿರುವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.ಜ.31 ರಂದು ಧ್ವಜಾರೋಹಣ ಕಾರ್ಯಕ್ರಮ ಬೆಳಿಗ್ಗೆ 8.30 ಕ್ಕೆ ನಡೆಯಲಿದೆ. ಈ ಸಂದರ್ಭ ರಾಷ್ಟ್ರಧ್ವಜವನ್ನು ತಹಶೀಲ್ದಾರ್ ಮಹೇಶ್ ಟಿ.ಎಸ್, ನಾಡಧ್ವಜವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಪರಿಷತ್ ಧ್ವಜವನ್ನು ಸೋಮವಾರಪೇಟೆ ಉಪ ಪೊಲೀಸ್ ಅಧೀಕ್ಷಕ ಟಿ.ಕೆ. ಮುರುಳೀಧರ್ ನೆರವೇರಿಸಲಿದ್ದಾರೆ.

ಬೆಳಿಗ್ಗೆ 8.40ಕ್ಕೆ ಬ್ರಹ್ಮಗಿರಿ ಮಹಾ ದ್ವಾರವನ್ನು ಸೋಮವಾರಪೇಟೆಯ ಕು.ಪ್ರಣವ್ ಎಸ್. ಕಶ್ಯಪ್ ಹಾಗೂ ಪುಷ್ಪಗಿರಿ ದ್ವಾರವನ್ನು ಬಸವನಹಳ್ಳಿ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿ ಗಳು ಉದ್ಘಾಟಿಸಲಿದ್ದಾರೆ. ಕಾರ್ಯ ಕ್ರಮದ ನಿರ್ವಹಣೆಯನ್ನು ಜಿಲ್ಲಾ ಕಸಾಪ

(ಮೊದಲ ಪುಟದಿಂದ) ಪಿಲಿಪ್ ವಾಸ್ ಮಾಡಲಿದ್ದಾರೆ. ಧ್ವಜಾರೋಹಣ ಮತ್ತು ದ್ವಾರಗಳ ಉದ್ಘಾಟನೆಯ ಸಂದರ್ಭ ಜಿ.ಪಂ ಸದಸ್ಯ ಲತೀಫ್, ಸೋಮವಾರಪೇಟೆ ತಾ.ಪಂ ಸದಸ್ಯೆ ಪುಷ್ಪ, ಗುಡ್ಡೆಹೊಸೂರು ಗ್ರಾ.ಪಂ ಉಪಾಧ್ಯಕ್ಷರಾದ ಲೀಲಾವತಿ ಮತ್ತು ಗ್ರಾ.ಪಂ.ನ ಸರ್ವ ಸದಸ್ಯರು, ಸಮಾಜ ಸೇವಕ ಬಿ.ಎಸ್. ಚಂದ್ರಶೇಖರ್, ಮಣಿ ಕುಮಾರ್ ಮತ್ತು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಗುರುಬಸಪ್ಪ ಉಪಸ್ಥಿತರಿರುವರು.

ಆಶ್ರಮ ಶಾಲಾ ವಿದ್ಯಾರ್ಥಿಗಳಿಂದ ಬೆಳಿಗ್ಗೆ 10 ಗಂಟೆಗೆ ಕಾವೇರಿ ವೇದಿಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ಬಸವನಹಳ್ಳಿ ಮೊರಾರ್ಜಿ ಶಾಲಾ ವಿದ್ಯಾರ್ಥಿಗಳು ನಾಡಗೀತೆಯನ್ನು, ಬಸವನಹಳ್ಳಿಯ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ರೈತಗೀತೆಯನ್ನು ಹಾಡಲಿದ್ದಾರೆ. ಈ ಸಂದರ್ಭ ಸ್ವಾಗತವನ್ನು ಕುಶಾಲನಗರ ಕಸಾಪ ಹೋಬಳಿ ಘಟಕದ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಬಾಲಸಾಹಿತಿ ತೀರ್ಥಹಳ್ಳಿಯ ಅಂತಃಕರಣ ನೆರವೇರಿಸಲಿದ್ದು, ಶಾಸಕ ಅಪ್ಪಚ್ಚು ರಂಜನ್ ಆಶಯ ನುಡಿಗಳನ್ನಾಡಲಿದ್ದಾರೆ.

ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ, ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್, ಸಂಸದ ಪ್ರತಾಪ್ ಸಿಂಹ, ಎಂಎಲ್‍ಸಿ ವೀಣಾ ಅಚ್ಚಯ್ಯ, ಸುನೀಲ್ ಸುಬ್ರಮಣಿ, ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ರೇಷ್ಮೆ ಮಾರುಕಟ್ಟೆ ನಿಗಮದ ಅಧ್ಯಕ್ಷರು ಟಿ.ಪಿ. ರಮೇಶ್, ಅರಣ್ಯಾಭಿವೃದ್ಧಿ ನಿಗಮದ ಪದ್ಮಿನಿ ಪೊನ್ನಪ್ಪ, ಗುಡ್ಡೆಹೊಸೂರು ಗ್ರಾ.ಪಂ ಅಧ್ಯಕ್ಷೆ ಭಾರತಿ, ಉ.ನಿ.ಸ.ಕ ಇಲಾಖೆಯ ಮಾಯಾದೇವಿ ಗಲಿಬಿಲಿ, ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ, ಕೊ.ಕ.ಬ. ಸಂಘ ಅಧ್ಯಕ್ಷ ಕೇಶವ ಕಾಮತ್, ಕೊಡಗು ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಭಾಗ್ಯ, ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪ್ರಮುಖರಾದ ಮೂಕೊಂಡ ಶಶಿ ಸುಬ್ರಮಣಿ, ರಾಜಾರಾವ್, ಕಸ್ತೂರಿ ಗೋವಿಂದಮ್ಮಯ್ಯ, ಡಾ. ಸುಭಾಷ್ ನಾಣಯ್ಯ, ಮಧೋಶ್ ಪೂವಯ್ಯ ಉಪಸ್ಥಿತರಿರುವರು.

ಮಧ್ಯಾಹ್ನ 12 ಗಂಟೆಗೆ ಗೀತಗಾಯನ ಕಾರ್ಯಕ್ರಮ ನಡೆಯಲಿದ್ದು ಅಧ್ಯಕ್ಷತೆಯನ್ನು ಸೋಮವಾರಪೇಟೆ ತನ್ವಿತಾಶೆಟ್ಟಿ ವಹಿಸಲಿದ್ದಾರೆ. ಹೆಚ್.ಜಿ. ಸಾಧನ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸೋಮವಾರಪೇಟೆಯ ಗಾಯಕರಾದ ತರುಣ್, ತಾನ್ಯ, ಅಮೂಲ್ಯ ವೈ.ಹೆಚ್, ಅಂಕಿತ, ಸುಧನ್ವ, ಶರತ್ ಕುಮಾರ್ ಎಸ್.ಜಿ. ಮೊಸಿನ, ದೊಡ್ಡಮಳ್ತೆ ಶುಭ ಶ್ರೀ ಭಾಗವಹಿಸಲಿದ್ದಾರೆ. ಈ ಸಂದರ್ಭ ಕೊಡಗು ಕ.ಸಾ.ಪ ಗೌರವಕೋಶಾಧ್ಯಕ್ಷ ಮುರಳೀಧರ ಎಸ್.ಎ, ನಿರ್ದೇಶಕ ಶ್ರೀಧರ್ ನೆಲ್ಲಿತಾಯ, ಬಾಲಕೃಷ್ಣ ರೈ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ನಿರ್ವಹಣೆಯನ್ನು ಕುಶಾಲನಗರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯವರು ವಹಿಸಿಕೊಳ್ಳಲಿದ್ದಾರೆ.

ಮಧ್ಯಾಹ್ನ 1 ಗಂಟೆಗೆ ಕವಿಗೋಷ್ಠಿ ನಡೆಯಲಿದ್ದು ಅಧ್ಯಕ್ಷತೆಯನ್ನು ಕೃತಜ್ಞ ಬೆಸೂರು ವಹಿಸಿಕೊಳ್ಳಲಿದ್ದು, ಕಾಜೂರು ಸತೀಶ್ ಆಶಯ ನುಡಿಗಳನ್ನಾಡಲಿದ್ದಾರೆ. ಈ ಸಂದರ್ಭ ಕವಿಗಳಾದ ಯಾಶಿಕಾ ಎಂ.ಎನ್. ಮಡಿಕೇರಿ ದಶಮಿ ತೋಳೂರು ಶೆಟ್ಟಹಳ್ಳಿ, ಪ್ರಿಯಾಂಕ ದಶರಥ, ಜೀವಿತ, ವಿಕಾಸ್, ರಕ್ಷಿತ ಪಿ.ಜೆ., ಮುಲ್ಲೇಂಗಡ ದರ್ಶನ್ ಸುಬ್ಬಯ್ಯ ಮಮತ ದೇಚಕ್ಕ, ದಿಶಾಂತ್ ಜಿ, ವಿಲನ್ಯ, ಪ್ರೀತಂ ಚಿನ್ನಪ್ಪ, ಚೆರಿಯಮನೆ ಪ್ರಿಯಾಂಕ, ಕೆ.ಕುಷನ್, ಅಜಿತ್ ಜಿ.ಎಸ್, ಡಿಂಪನ ಎಂ.ಟಿ.ರಮ್ಯ ಎನ್.ಡಿ, ಹಸ್ತಿವಿ ಗೌಡ, ಮಧುಶ್ರೀ ಭಾಗವಹಿಸಲಿದ್ದಾರೆ. ಮಡಿಕೇರಿ ಕ.ಸಾ.ಪ. ಅಧ್ಯಕ್ಷ ಕುಡೆಕಲ್ ಸಂತೋಷ್, ಕ.ಸಾ.ಪ. ನಿರ್ದೇಶಕರುಗಳಾದ ಕಿಗ್ಗಾಲು ಗಿರೀಶ್, ಶಾಲಿನಿ, ಗೌರಿ ಉಪಸ್ಥಿತರಿರುವರು.

ಮಧ್ಯಾಹ್ನ 2.30ಕ್ಕೆ ವಿಚಾರಗೋಷ್ಠಿ ನಡೆಯಲಿದ್ದು, ಅಧ್ಯಕ್ಷತೆಯನ್ನು ನಿಮಿಷ ಎಸ್.ಎಂ ವಹಿಸಲಿದ್ದಾರೆ. ಆಕಾಶವಾಣಿ ಉದ್ಘೋಷಕರಾದ ಸುಬ್ರಾಯ ಸಂಪಾಜೆ ಆಶಯ ನುಡಿಗಳನ್ನಾಡಲಿದ್ದಾರೆ. ಮಕ್ಕಳ ಸಾಹಿತ್ಯ- ಆಧುನಿಕತೆಯ ಸವಾಲುಗಳ ಬಗ್ಗೆ ಕು. ಶ್ರೇಯಸ್, ವಿಷಯ ನನ್ನ ಭಾಷೆ- ನನ್ನ ಕನ್ನಡ ವಿಷಯದ ಬಗ್ಗೆ ಕು. ಋತ್ವಿಕ್ ಹೆಚ್.ಎಸ್, ಮಕ್ಕಳ ಮನಸ್ಸುಗಳಲ್ಲಿ ಸಾಹಿತ್ಯದ ಪಾತ್ರದ ಕುರಿತಾಗಿ ಕು. ಶೈಮ ಫಾತಿಮಾ, ಶಿಕ್ಷಣ ಮಾಧ್ಯಮಗಳಲ್ಲಿ ಸಾಹಿತ್ಯದ ಪಾತ್ರದ ಕುರಿತು ಕು.ನಿತೀಶ್ ಬಿ.ಡಿ.ವಿಷಯ ಮಂಡನೆ ಮಾಡಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮ್ಮೇಳನಾಧ್ಯಕ್ಷರಾದ ಕು.ಸಿಂಚನ ವಹಿಸಲಿದ್ದಾರೆ.

ಸನ್ಮಾನ: ಕು. ನಿಹಾಲ್ ಸಂತೋಷ್ (ಬಾಲ ಪ್ರತಿಭೆ), ಕು. ಪಿ.ಆರ್ ಆರ್ಯ (ಚಿತ್ರಕಲಾ ಕ್ಷೇತ್ರ), ಕು. ಶ್ರೀಲಕ್ಷ್ಮೀ ಬಿ.ಎಸ್. (ಭರತನಾಟ್ಯ), ಕು.ಜಾಗೃತಿ ಕಟ್ಟೆಮನೆ, ಕು.ಆಶಯ (ಸಾಹಿತ್ಯ ಕ್ಷೇತ್ರ), ಕು. ಉಮ್ಮುಸಲ್ಮಾಬಿ (ಚಿತ್ರಕಲೆ)

ಬಹುಮುಖ ಪ್ರತಿಭೆಗಳಾದ ಶಿಂಷಾ ಜೆ.ಡಿ, ಶ್ರೀಲಕ್ಷ್ಮೀ, ರಿಶಾ ಎಸ್.ಎ, ಶ್ರಾವಣಿ, ಚಂದನ್ ನೆಲ್ಲಿತ್ತಾಯ ಅವರನ್ನು ಸನ್ಮಾನಿಸಲಾಗುವದು ಎಂದು ಲೋಕೇಶ್ ಸಾಗರ್ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸುಮಾರು 1500ಕ್ಕೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಸಾಪ ಮಾಧ್ಯಮ ಕಾರ್ಯದರ್ಶಿ ಅಶ್ವಥ್ ಕುಮಾರ್, ಜಿಲ್ಲಾ ಕಸಾಪ ನಿರ್ದೇಶಕರಾದ ಪಿಲಿಪ್‍ವಾಸ್ ಹಾಗೂ ಶಾಲಿನಿ ಉಪಸ್ಥಿತರಿದ್ದರು.