*ಗೋಣಿಕೊಪ್ಪಲು, ಜ. 28: ಪೆÇನ್ನಂಪೇಟೆ ಪಟ್ಟಣವನ್ನು ಐತಿಹಾಸಿಕ ಸ್ಮಾರಕಗಳ ಪಟ್ಟಣ ಎಂದು ಘೋಷಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಪೆÇನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಡೀನ್ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ ತಿಳಿಸಿದರು.
ಮಹಿಳಾ ಸಮಾಜ ಸಮೀಪದ ಶಾಲಾ ಕಟ್ಟಡದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಶಿಕ್ಷಕರ ವೃಂದ ಆಯೋಜಿಸಿದ್ದ 1917 ರಲ್ಲಿ ಸ್ಥಾಪನೆಗೊಂಡ ಜಿಲ್ಲೆಯ ಎರಡನೆಯ ಬಾಲಕಿಯರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಮತ್ತು ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಪೆÇನ್ನಂಪೇಟೆ ಪಟ್ಟಣದಲ್ಲಿ ಹಲವು ಕಟ್ಟಡಗಳು ಶತಮಾನವÀನ್ನು ಆಚರಿಸಿಕೊಂಡಿವೆ. ಗಾಂಧೀಜಿ, ವಿನೋಭಾ ಬಾವೆ ಅಂತಹ ಮಹನೀಯರು ಭೇಟಿ ನೀಡಿದ ಸ್ಥಳವಾಗಿದೆ. ಇಂತಹ ಸ್ಥಳವನ್ನು ಉಳಿಸಿಕೊಳ್ಳುವದು ಬಹುಮುಖ್ಯ ಇಂತಹ ಕಟ್ಟಡಗಳನ್ನು ಐತಿಹಾಸಿಕ ಸ್ಮಾರಕಗಳೆಂದು ಘೋಷಿಸಬೇಕಾಗಿದೆ. ಈ ಮೂಲಕ ಪಟ್ಟಣವನ್ನು ಐತಿಹಾಸಿಕ ಸ್ಮಾರಕ ಪಟ್ಟಣವನ್ನಾಗಿ ಮಾಡಬೇಕು ಎಂದರು.
ಹಿರಿಯರು ಶಿಕ್ಷಣಕ್ಕಾಗಿ ನೀಡಿದ ದಾನದ ಜಾಗದಲ್ಲಿ ಉನ್ನತ ಶಿಕ್ಷಣಗಳನ್ನು ಮಕ್ಕಳಿಗೆ ನೀಡುವ ಮೂಲಕ ಅವರ ಕನಸುಗಳನ್ನು ನನಸು ಮಾಡಬೇಕಾಗಿದೆ ಎಂದರು. ಜಿ.ಪಂ. ಸದಸ್ಯೆ ಶ್ರೀಜಾ ಶಾಜಿ ಮಾತನಾಡಿ, ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಶಾಲೆಯಲ್ಲಿ ಓದಿದ ಮಕ್ಕಳು ಇಂದು ಮಹಾನ್ ಸಾಧನೆಗಳನ್ನು ಮಾಡಿದ್ದಾರೆ. ಮುಂದೆಯೂ ಇಂತಹ ಅವಕಾಶಗಳನ್ನು ಪೋಷಕರು ತಮ್ಮ ಮಕ್ಕಳಿಗೆ ನೀಡುವ ಮೂಲಕ ಹಿರಿಯರ ಕನಸು ನನಸು ಮಾಡಬೇಕಾಗಿದೆ ಎಂದು ಹೇಳಿದರು. ಇದೇ ಸಂದರ್ಭ ಶಾಲೆಗೆ ಜಿ.ಪಂ. ಅನುದಾನದಿಂದ ಒಂದು ಲಕ್ಷ ನೀಡುವದಾಗಿ ಘೋಷಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಮಾತನಾಡಿ, ಇತಿಹಾಸವನ್ನು ತಿಳಿದುಕೊಳ್ಳುವ ಮೂಲಕ ನಮ್ಮ ಹಿರಿಯರ ದಾನ, ಧರ್ಮಗಳನ್ನು ಅರಿತುಕೊಳ್ಳಬೇಕಾಗಿದೆ ಎಂದರು.
ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾಕಮಾಡ ಎನ್. ಚಂಗಪ್ಪ ಅಧ್ಯಕ್ಷತೆಯಲ್ಲಿ ಶಾಲೆಯ ಸ್ಥಳ ದಾನಿಗಳಾದ ಸುಂದರ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಅವರ ಸೊಸೆ ಶಶಿಕಲಾ ಹಾಗೂ ಜಿ.ಪಂ. ಸದಸ್ಯೆ ಶ್ರೀಜಾ ಶಾಜಿ, ತಾ.ಪಂ. ಸದಸ್ಯೆ ಆಶಾ ಪೂಣಚ್ಚ, ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತಾ ಗಣೇಶ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಭಾಗ್ಯ, ಮುಖ್ಯ ಶಿಕ್ಷಕಿ ಫಿಲೋಮಿನ, ಶತಮಾನೋತ್ಸವ ಸಮಿತಿ ಸಂಚಾಲಕ ಜಿಮ್ಮಿ ಅಣ್ಣಯ್ಯ, ಪುಚ್ಚಿಮಾಡ ಹರೀಶ್ ನೆರವೇರಿಸಿದರು. ಈ ಸಂದರ್ಭ ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಶತಮಾನೋತ್ಸವ ಆಚರಣೆ ಸಮಿತಿ ಉಪಾಧ್ಯಕ್ಷರುಗಳಾದ ರೇಖಾ ಶ್ರೀಧರ್, ಬಾನಂಡ ರಮೇಶ್, ಉಪಸ್ಥಿತರಿದ್ದರು. ಶಾಲಾ ವರದಿ ಯನ್ನು ಶಿಕ್ಷಕಿ ಜಾನ್ಸಿ ವಾಸುವರ್ಮ ಹಾಗೂ ವಂದನೆಯನ್ನು ಶಿಕ್ಷಕಿ ರೋಝಿ ನಿರ್ವಹಿಸಿದರು.
ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಚಂದ್ರಶೇಖರ್ ಮತ್ತು ದೈಹಿಕ ಶಿಕ್ಷಕ ಮಹೇಶ್ ಬಹುಮಾನ ವಿತರಿಸಿದರು. ವಿದ್ಯಾರ್ಥಿಗಳ ದತ್ತು ಸ್ವೀಕಾರ ನಿಧಿಗಾಗಿ ಒಂದು ಲಕ್ಷ ಇಡುಗಂಟಿನ ಠೇವಣಿ ಹಣದ ಬಡ್ಡಿಯ ಪೆÇ್ರೀತ್ಸಾಹ ಧನಕ್ಕೆ ಆಯ್ಕೆಯಾದ 4ನೇ ತರಗತಿ ವಿದ್ಯಾರ್ಥಿನಿ ಸ್ನೇಹಳಿಗೆ ಆಯ್ಕೆ ಪತ್ರವನ್ನು ನೀಡಲಾಯಿತು.
ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.