ಕುಶಾಲನಗರ, ಜ. 28: ಕ್ರೀಡೆಯಲ್ಲಿ ಪಾಲ್ಗೊಳ್ಳುವದು ಪ್ರಮುಖವಾಗಿದ್ದು ಸೋಲು-ಗೆಲುವು ಮುಖ್ಯವಲ್ಲ ಎಂದು ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಭಲಂ ಭೋಜಣ್ಣರೆಡ್ಡಿ ಹೇಳಿದರು.

ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ಉದ್ಘಾಟಿಸಿ ಮಾತನಾಡಿದರು.

ಅಪ್ಪಚ್ಚು ಗೆಳೆಯರ ಬಳಗದ ಕಾರ್ಯದರ್ಶಿ ಪವನ್ ಮಾತನಾಡಿ, ಉತ್ತಮ ಕ್ರೀಡಾ ಪಟು ಶಿಕ್ಷಕರೂ ಆಗಿದ್ದ ಅಪ್ಪಚ್ಚು ಅವರ ಸ್ಮರಣೆಯಲ್ಲಿ ನಡೆಯುತಿರುವ ಈ ಕ್ರಿಕೆಟ್ ಟೂರ್ನಿಯಲ್ಲಿ ಸುಮಾರು 20 ತಂಡಗಳು ಪಾಲ್ಗೊಂಡಿವೆ ಎಂದರಲ್ಲದೆ, ವಿಜೇತರಿಗೆ ಪ್ರಥಮ ಬಹುಮಾನವಾಗಿ 40 ಸಾವಿರ ರೂ ಮತ್ತು ಟ್ರೋಫಿ,

ದ್ವಿತೀಯ ಬಹುಮಾನವಾಗಿ ರೂ. 30 ಸಾವಿರ ಮತ್ತು ಟ್ರೋಫಿಯನ್ನು ನೀಡಲಾಗುತ್ತಿದೆ ಎಂದರು.

ಸಂಘದ ಅಧ್ಯಕ್ಷ ಯತೀಶ್, ಸಹ ಕಾರ್ಯದರ್ಶಿ ತಿಲಕ್, ನಿರ್ದೇಶಕ ಅನುದೀಪ್, ಸುರೇಶ್, ದರ್ಶನ್, ದೀಪು, ಜಿಯಾವುದ್ದೀನ್ ಇದ್ದರು.