ಸೋಮವಾರಪೇಟೆ, ಜ. 27: ಜಿಲ್ಲಾಡಳಿತ, ಜಿ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಮತ್ತು ತಾಲೂಕು ಯುವ ಒಕ್ಕೂಟ, ನೇಗಳ್ಳೆ ವೀರಭದ್ರೇಶ್ವರ ಯುವಕ ಸಂಘ ಇವುಗಳ ಆಶ್ರಯದಲ್ಲಿ ಸಮೀಪದ ನೇಗಳ್ಳೆ ಗ್ರಾಮದ ಶಾಲಾ ಮೈದಾನದಲ್ಲಿ ನಡೆದ ಜಿಲ್ಲಾ ಯುವ ಜನಮೇಳ ಸ್ಪರ್ಧಾ ಕಾರ್ಯಕ್ರಮದ ಕೋಲಾಟದಲ್ಲಿ ಪೊನ್ನಂಪೇಟೆಯ ಜೈ ಭೀಮ್ ಯುವಕ ಸಂಘ ಪ್ರಥಮ ಸ್ಥಾನ ಪಡೆಯಿತು.

ಯುವತಿಯರ ವಿಭಾಗದಲ್ಲಿ ವೀರಾಜಪೇಟೆಯ ನಿಸರ್ಗ ಯುವತಿ ಮಂಡಳಿ (ಪ್ರ), ಮಡಿಕೇರಿಯ ನೆಲ್ಲಕ್ಕಿ ಯುವತಿ ಮಂಡಳಿ (ದ್ವಿ) ಸ್ಥಾನ ಗಳಿಸಿದವು. ಜಾನಪದ ನೃತ್ಯದಲ್ಲಿ ಪೊನ್ನಂಪೇಟೆಯ ಜೈ ಭೀಮ್ ಯುವಕ ಸಂಘ (ಪ್ರ), ಯುವತಿಯರ ವಿಭಾಗದಲ್ಲಿ ವೀರಾಜಪೇಟೆಯ ನಿಸರ್ಗ ಯುವತಿ ಮಂಡಳಿ (ಪ್ರ), ಮಡಿಕೇರಿಯ ಕಾವೇರಿ ಕಲಾವೃಂದ (ದ್ವಿ) ನೆಲ್ಲಕ್ಕಿ ಯುವತಿ ಮಂಡಳಿ (ತೃ) ಸ್ಥಾನ ಗಳಿಸಿದವು.

ಪುರುಷರ ವಿಭಾಗದ ಭಜನೆಯಲ್ಲಿ ಮಡಿಕೇರಿ ತೊಂಭತ್ತುಮನೆ ತ್ರಿನೇತ್ರ ಯುವಕ ಸಂಘ (ಪ್ರ), ಸೋಮವಾರಪೇಟೆಯ ಗಂಧರ್ವ ಯುವಕ ಸಂಘ (ದ್ವಿ), ಪೊನ್ನಂಪೇಟೆಯ ಜೈ ಭೀಮ್ ಯುವಕ ಸಂಘ (ತೃ) ಸ್ಥಾನಗಳಿಸಿದವು. ಯುವತಿಯರ ವಿಭಾಗದಲ್ಲಿ ವೀರಾಜಪೇಟೆಯ ನಿಸರ್ಗ ಯುವತಿ ಮಂಡಳಿ (ಪ್ರ), ಕಿರಗಂದೂರು ಪ್ರಕೃತ್ತಿ ಯುವತಿ ಮಂಡಳಿ (ದ್ವಿ) ಹಾಗೂ ತೋಳೂರುಶೆಟ್ಟಳ್ಳಿಯ ಕಾವೇರಿ ಯುವತಿ ಮಂಡಳಿ (ತೃ) ಸ್ಥಾನಗಳಿಸಿದವು.

ಜಾನಪದ ಗೀತೆ ಪುರುಷರ ವಿಭಾಗದಲ್ಲಿ ಸೋಮವಾರಪೇಟೆ ಗಂಧರ್ವ ಯುವಕ ಸಂಘ, (ಪ್ರ), ಪೊನ್ನಂಪೇಟೆಯ ಜೈ ಭೀಮ್ ಯುವಕ ಸಂಘ ಮತ್ತು ಮಡಿಕೇರಿ ತೊಂಭತ್ತುಮನೆ ತ್ರಿನೇತ್ರ ಯುವಕ ಸಂಘ (ತೃ) ಸ್ಥಾನಗಳಿಸಿದವು. ಯುವತಿಯ ವಿಭಾಗದಲ್ಲಿ ತೋಳೂರುಶೆಟ್ಟಳ್ಳಿಯ ಕಾವೇರಿ ಯುವತಿ ಮಂಡಳಿ (ಪ್ರ), ಶುಂಟಿಯ ಪೂಜಾ ಯುವತಿ ಮಂಡಳಿ (ದ್ವಿ) ಹಾಗೂ ಕಿರಗಂದೂರು ಪ್ರಕೃತ್ತಿ ಯುವತಿ ಮಂಡಳಿ (ತೃ) ಸ್ಥಾನಗಳಿಸಿದವು.

ಯುವತಿಯರ ವಿಭಾಗದ ಸೋಭಾನೆ ಪದ ವಿಭಾಗದಲ್ಲಿ ಶುಂಟಿಯ ಪೂಜಾ ಯುವತಿ ಮಂಡಳಿ (ಪ್ರ), ಕಿರಗಂದೂರು ಪ್ರಕೃತ್ತಿ ಯುವತಿ ಮಂಡಳಿ (ದ್ವಿ) ಹಾಗೂ ಮಡಿಕೇರಿಯ ನೆಲ್ಲಕ್ಕಿ ಯುವತಿ ಮಂಡಳಿ (ತೃ) ಸ್ಥಾನ ಗಳಿಸಿದವು. ಕಿರಗಂದೂರು ಪ್ರಕೃತ್ತಿ ಯುವತಿ ಮಂಡಳಿ (ಪ್ರ), ಶುಂಟಿಯ ಪೂಜಾ ಯುವತಿ ಮಂಡಳಿ (ದ್ವಿ) ಹಾಗೂ ವೀರಾಜಪೇಟೆಯ ನಿಸರ್ಗ ಯುವತಿ ಮಂಡಳಿ (ತೃ) ಸ್ಥಾನಗಳಿಸಿದವು.

ಗೀಗಿ ಪದದ ಪುರುಷರ ವಿಭಾಗದಲ್ಲಿ ಪೊನ್ನಂಪೇಟೆಯ ಜೈ ಭೀಮ್ ಯುವಕ ಸಂಘ (ಪ್ರ), ಸೋಮವಾರಪೇಟೆಯ ಗಂಧರ್ವ ಯುವಕ ಸಂಘ (ದ್ವಿ) ಸ್ಥಾನಗಳಿಸಿದವು. ಯುವತಿಯರ ವಿಭಾಗಲ್ಲಿ ಕಿರಗಂದೂರು ಪ್ರಕೃತ್ತಿ ಯುವತಿ ಮಂಡಳಿ (ಪ್ರ), ವೀರಾಜಪೇಟೆಯ ನಿಸರ್ಗ ಯುವತಿ ಮಂಡಳಿ (ದ್ವಿ) ಹಾಗೂ ವೀರಾಜಪೇಟೆಯ ಅಂಬೇಡ್ಕರ್ ಯುವತಿ ಮಂಡಳಿ (ತೃ) ಸ್ಥಾನಗಳಿಸಿದರು.

ವೈಯುಕ್ತಿಕ ವಿಭಾಗದ ಭಾವಗೀತೆಯ ಯುವಕರ ವಿಭಾಗದಲ್ಲಿ ಪೊನ್ನಂಪೇಟೆ ಗಿರೀಶ್ (ಪ್ರ) ಚಂದನ್ ನೆಲ್ಲಿತಾಯ (ದ್ವಿ) ಹಾಗೂ ಸೋಮವಾರಪೇಟೆಯ ಪುರುಷೋತ್ತಮ್ (ತೃ) ಸ್ಥಾನಗಳಿಸಿದರು. ಯುವತಿಯರ ವಿಭಾಗದಲ್ಲಿ ಸೋಮವಾರಪೇಟೆಯ ಚಂದ್ರಿಕಾ (ಪ್ರ) ಕ್ರೀಷ್ಮ ಹಾಗೂ ವಸಂತಿ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವು.

ಲಾವಣಿ ವಿಭಾಗದಲ್ಲಿ ಪೊನ್ನಂಪೇಟೆಯ ಎಸ್.ಟಿ. ಗಿರೀಶ್ (ಪ್ರ), ಸೋಮವಾರಪೇಟೆಯ ಪ್ರವೀಣ್ ಕುಮಾರ್ (ದ್ವಿ), ಪುರುಷೋತ್ತಮ್ (ತೃ) ಸ್ಥಾನಗಳಿಸಿದರು. ಯುವತಿಯರ ವಿಭಾಗದಲ್ಲಿ ಸೋಮವಾರಪೇಟೆಯ ಮಂಜುಭಾರ್ಗವಿ (ಪ್ರ), ಯಶೋಧ (ದ್ವಿ) ಹಾಗೂ ವೀರಾಜಪೇಟೆಯ ಯಶೋಧ ಚಂಗಪ್ಪ (ತೃ) ಸ್ಥಾನಗಳಿಸಿದರು.

ರಂಗ ಗೀತೆಯ ಯುವಕರ ವಿಭಾಗದಲ್ಲಿ ಪೊನ್ನಂಪೇಟೆಯ ಎಸ್.ಟಿ. ಗಿರೀಶ್ (ಪ್ರ), ಸೋಮವಾರಪೇಟೆಯ ಮಹೇಶ್ (ದ್ವಿ) ಹಾಗೂ ಮಂಜುನಾಥ್ (ತೃ) ಸ್ಥಾನಗಳಿಸಿದರು. ಯುವತಿಯರ ವಿಭಾಗದಲ್ಲಿ ಸೋಮವಾರಪೇಟೆಯ ಚಂದ್ರಕಲಾ (ಪ್ರ) ಮಂಜುಭಾರ್ಗವಿ (ದ್ವಿ) ಹಾಗೂ ವೀರಾಜಪೇಟೆಯ ಯಶೋಧ ಚಂಗಪ್ಪ (ತೃ) ಸ್ಥಾನಗಳಿಸಿದರು.

ಏಕ ಪಾತ್ರಾಭಿನಯದ ಯುವಕರ ವಿಭಾಗದಲ್ಲಿ ಸೋಮವಾರಪೇಟೆಯ ಶಾಂತಪ್ಪ (ಪ್ರ), ವೀರಾಜಪೇಟೆಯ ನಿಂಗರಾಜು (ದ್ವಿ) ಹಾಗೂ ಸೋಮವಾರಪೇಟೆ ಪ್ರವೀಣ್ (ತೃ) ಸ್ಥಾನಗಳಿಸಿದರು. ಮಹಿಳೆಯರ ವಿಭಾಗಲದಲಿ ಮಂಜುಭಾರ್ಗವಿ (ಪ್ರ), ಮಡಿಕೇರಿಯ ಜೀವಿತಾ ರವೀಂದ್ರ (ದ್ವಿ) ಹಾಗೂ ವೀರಾಜಪೇಟೆಯ ಯಶೋಧ ಚಂಗಪ್ಪ (ತೃ) ಸ್ಥಾನಗಳಿಸಿದರು.

ಬಹುಮಾತನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಭದ್ರೇಶ್ವರ ಯುವಕ ಸಂಘದ ಅಧ್ಯಕ್ಷ ಎನ್.ಎಂ. ದಿವಾಕರ್ ವಹಿಸಿದ್ದರು. ನೇರುಗಳಲೆ ಗ್ರಾ.ಪಂ. ಅಧ್ಯಕೆ ಎ.ಹೆಚ್. ತಿಮ್ಮಯ್ಯ, ವಿಶ್ವ ಬ್ರಿಗೇಡ್ ರಾಜ್ಯಾಧ್ಯಕ್ಷ ಗಿರೀಶ್ ಮಲ್ಲಪ್ಪ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಎಂ.ಡಿ. ಹರೀಶ್, ತಾಲ್ಲೂಕು ಘಟಕದ ಅಧ್ಯಕ್ಷರಾದ ಸೋಮವಾರಪೇಟೆ ಶೋಭರಾಜ್, ವೀರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ಮನೆಯಪಂಡ ಶೀಲಾ ಬೋಪಣ್ಣ ಹಾಗೂ ಮಡಿಕೇರಿ ತಾಲೂಕಿನ ಅಧ್ಯಕ್ಷ ನವೀನ್ ದೇರಳ ಡಿ. ಉಪಸ್ಥಿತರಿದ್ದರು.

ತೀರ್ಪುಗಾರರಾಗಿ ವಿಘ್ನೇಶ್ವರ ಕಾಲೇಜಿನ ಪ್ರಾಧ್ಯಾಪಕ ಜಯಕುಮಾರ್, ಮಡಿಕೇರಿಯ ರವಿಕೃಷ್ಣ, ವೀರಾಜಪೇಟೆಯ ವಾಮನ ಅವರುಗಳು ಕಾರ್ಯನಿರ್ವಹಿಸಿದರು.