ಸಿದ್ದಾಪುರ, ಜ. 26: ಚೆಟ್ಟಳ್ಳಿಯ ವಲಯ ಜೆ.ಡಿ.ಎಸ್. ಕಾರ್ಯಕರ್ತರ ಸಭೆ ಚೆಟ್ಟಿಳ್ಳಿಯ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ವಲಯ ಅಧ್ಯಕ್ಷ ಅಲೆಗ್ಸಾಂಡರ್ ಅಧ್ಯಕ್ಷೆತೆಯಲ್ಲಿ ನಡೆಯಿತು.
ಈ ಸಂದರ್ಭ ಮಾಜಿ ಸಚಿವ ಹಾಗೂ ಜೆ.ಡಿ.ಎಸ್. ಮುಖಂಡ ಬಿ.ಎ. ಜೀವಿಜಯ ಮಾತನಾಡಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುವದು ಖಚಿತವೆಂದರು. ಜಿಲ್ಲೆಯಲ್ಲಿ ಜೆ.ಡಿ.ಎಸ್. ಪಕ್ಷ ಬಲವಾಗಿದ್ದು, ರಾಜ್ಯದಲ್ಲಿ ಜಿಲ್ಲೆಯಲ್ಲಿ ಜೆ.ಡಿ.ಎಸ್. ಪಕ್ಷದ ಪರ ಮತದಾರರ ಒಲವಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವೀರಾಜಪೇಟೆ ಕ್ಷೇತ್ರದಿಂದ ಸಂಕೇತ್ ಪೂವಯ್ಯ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರು ಈಗಾಗಲೇ ಆಯ್ಕೆಗೊಳಿಸಿದ್ದಾರೆಂದು ತಿಳಿಸಿದರು. ಕಾರ್ಯಕರ್ತರು ಪಕ್ಷವನ್ನು ಇನ್ನಷ್ಟು ಬಲಪಡಿಸಲು ಶ್ರಮಿಸಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಯುವ ಜೆ.ಡಿ.ಎಸ್. ಅಧ್ಯಕ್ಷ ಸಿ.ಎಲ್. ವಿಶ್ವ, ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ.ಬಿ. ಗಣೇಶ್ ಮಾತನಾಡಿದರು. ಗ್ರಾ.ಪಂ. ಸದಸ್ಯರುಗಳಾದ ಡೆನ್ನಿ ಬೋರಸ್, ಪ್ರಭಾಕರ್, ಪಕ್ಷದ ಪದಾಧಿಕಾರಿಗಳಾದ ಕೊಳಂಬೆ ವಿನು, ರೆಮ್ಮಿ ರೈಮಂಡ್ ಸರೋವ, ಮಹಮ್ಮದ್ ಅಲಿ, ಸಂಜೀವ್, ಲೋಕೇಶ್ ಕುಮಾರ್, ರವಿ, ಬಬ್ಲು ಲೋಬೋ, ಲೂಯಿಸ್, ರತನ್‍ದಾಸ್, ಕೃಷ್ಣಪ್ಪ, ಷಂಶು ಇತರರು ಹಾಜರಿದ್ದರು.