ಗೋಣಿಕೊಪ್ಪ ವರದಿ, ಜ. 27: ಬೆಕ್ಕೆಸೊಡ್ಲೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ದಶಕಗಳ ಸೇವೆ ಸಲ್ಲಿಸಿದವರನ್ನು ಶಾಲೆಯ ವಾರ್ಷಿಕೋತ್ಸವ ಸಂದರ್ಭ ಸನ್ಮಾನಿಸಲಾಯಿತು. ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಗಳಿಸಿದ ಕೆ.ಈ. ಶ್ರೀಕೃಷ್ಣ ಸನ್ಮಾನ ಸ್ವೀಕರಿಸಿದರು.

ಈ ಸಂದರ್ಭ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ, ಮಹಿಳೆಯರಿಗೆ ಹಾಗೂ ಅಂಗನವಾಡಿ ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಆಡಳಿತ ಮಂಡಳಿಯವರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಚ್ಚಮಾಡ ಬೋಸ್ ನಡೆಸಿಕೊಟ್ಟರು.

ಸಮಾರೋಪದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷೆ ಪಿ.ಕೆ. ಪಾರ್ವತಿ, ಜಿ.ಪಂ. ಶಿಕ್ಷಣ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ, ಸದಸ್ಯ ಬಾನಂಡ ಪೃಥ್ಯು, ಕಾನೂರು ಗ್ರಾ.ಪಂ. ಅಧ್ಯಕ್ಷೆ ಬಿ.ಸಿ. ಲತಾ ಕುಮಾರಿ, ಸದಸ್ಯೆ ಶಿಲ್ಪ ಅಪ್ಪಣ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎ. ಲೋಕೇಶ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಿ.ಪಿ. ಉತ್ತಪ್ಪ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಚಿಕ್ಕದೇವಯ್ಯ, ಜೀವನ್, ದಾನಿಗಳಾದ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಸ್ವಾಸ್ಫ್ಯ ಫೌಂಡೇಶನ್‍ನ ನಿರ್ದೇಶಕರಾದ ಸುಬ್ರಮಣ್ಯ ರಾವ್, ತೀತಮಾಡ ಶಾರದ, ಮಚ್ಚಮಾಡ ಬೋಜಮ್ಮ, ಬೆಳ್ಯಪ್ಪ, ಮೀನಾಕ್ಷಿ, ಕಳ್ಳಿಚಂಡ ಚೋಂದಮ್ಮ, ಮಾಣಿಪಂಡ ಪಾರ್ವತಿ, ಕಾಟಿಮಾಡ ಲೀಲಾ, ವನಜಾಕ್ಷಿ ಉಪಸ್ಥಿತರಿದ್ದರು. ಮಕ್ಕಳಿಂದ ಕವಾಯತು ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.

ಬಿ.ಟಿ. ಕಾವೇರಮ್ಮ ಸರ್ವರನ್ನು ಸ್ವಾಗತಿಸಿದರೆ, ಸಿ.ಎಸ್. ಡೈನಿ ಶಾಲಾ ವರದಿ ವಾಚಿಸಿದರು, ಶ್ರೀಕೃಷ್ಣ ನಿರೂಪಿಸಿದರು.