ವೀರಾಜಪೇಟೆ, ಜ. 26: ಯಾವದೇ ದೇಶ ಮುಂದುವರೆಯಲು ಯುವಕರ ಪಾತ್ರ ಮುಖ್ಯ. ವಿದ್ಯಾರ್ಥಿಗಳು ಸ್ವಾಮಿ ವಿವೇಕಾ ನಂದರಂತೆ ಗುರಿ ಮುಟ್ಟುವತನಕ ಶ್ರದ್ಧೆಯಿಂದ ಕಾರ್ಯನ್ಮುಖ ರಾಗಿರಬೇಕು ಎಂದು ಅಪರ ಸಿವಿಲ್ ನ್ಯಾಯಾಧೀಶ ಬಿ.ಕೆ.ಮನು ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ‘ಯುವಜನ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಕಾನೂನು ಅರಿವು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಕೀಲರ ಸಂಘದ ಅಧ್ಯಕ್ಷ ಎನ್.ಜಿ. ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಪ್ರತಿಯೊಬ್ಬರಿಗೂ ಗುರಿ ಎಂಬದು ಮುಖ್ಯ, ಇಂದಿನ ದಿನದಲ್ಲಿ ಶಿಕ್ಷಣ ಅಗತ್ಯವಿದ್ದರೂ ಎಲ್ಲರ ಕೈಗೆ ಸಿಗು ವಂತದಲ್ಲ ಎಂದರು. ವಿದ್ಯಾರ್ಥಿಗಳು ಶ್ರದ್ಧೆ ಯಿಂದ ವಿದ್ಯೆ ಕಲಿತು ತಮ್ಮ ಜೀವನ ವನ್ನು ರೂಪಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದರು.

ವಕೀಲ ಬಿ.ಬಿ. ಮಾದಪ್ಪ ಉಪನ್ಯಾಸಕರಾಗಿ ಭಾಗವಹಿಸಿ, ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶ ಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ಬೇರೆಯವರಿಗೆ ತೊಂದರೆಯಾಗದ ರೀತಿಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿದ್ದ ಕಾಲೇಜಿನ ವಿವೇಕಾನಂದ ಸಮಿತಿಯ ಸಂಚಾಲಕಿ ಎಂ.ಎಂ. ಸುನೀತ ಅವರು ಮಾತನಾಡಿದರು. ವಿದ್ಯಾರ್ಥಿಗಳಾದ ರುಚಿತ್ ಸ್ವಾಗತಿಸಿದರು. ಸ್ಮಿತಾ ಮತ್ತು ಯೋಗಿತಾ ನಿರೂಪಿಸಿದರೆ. ಮೋನಿಕಾ ವಂದಿಸಿದರು.