ವೀರಾಜಪೇಟೆ, ಜ. 26: ಜನತೆಯ ನಿರಂತರ ಸಮಸ್ಯೆಗಳು ಪರಿಹರಿಸುವಲ್ಲಿ ಕಾಂಗ್ರೆಸ್ ಸರಕಾರ ವಿಫಲ ಗೊಂಡಿದ್ದು, ಬಿಜೆಪಿ ಜನಪ್ರತಿನಿಧಿ ಗಳಿರುವ ಈ ಜಿಲ್ಲೆಯಲ್ಲಿ ತಾನು ಶಾಸಕ ನಾಗಿದ್ದಾಗ ಇದ್ದ ಲೋಪದೋಷಗಳು ಮುಂದುವರಿದಿವೆ; ಹಾಗಾಗಿ ಜಾತ್ಯತೀತ ಜನತಾದಳ ಹೋರಾಟಕ್ಕೆ ಇಳಿದಿದೆ ಎಂದು ವೀರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಡಿ. ಬಸವರಾಜು ಹೇಳಿದರು.

ವೀರಾಜಪೇಟೆ ಬಳಿಯ ಕೆದಮುಳ್ಳೂರು ಗ್ರಾಮದ ಚೂರಿಯಾಲದಲ್ಲಿ ಜೆಡಿಎಸ್ ಪಕ್ಷದ ವಲಯ ಸಮಿತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ, ಪಕ್ಷದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಿ.ಎಲ್. ವಿಶ್ವ, ಮುಖಂಡ ಸಿ.ಎ. ನಾಸರ್, ಕ್ಷೇತ್ರದ ಅಧ್ಯಕ್ಷ ಎಸ್.ಹೆಚ್. ಮತೀನ್, ಬಿಳುಗುಂದ ಗ್ರಾಮದ ಮಜೀದ್ ಮಾತನಾಡಿ ದರು. ಕೆದಮು ಳ್ಳೂರು ವಲಯ ಅಧ್ಯಕ್ಷ ಮಾತಂಡ ಚಂಗಪ್ಪ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ವಲಯ ಅಧ್ಯಕ್ಷ ಅಮ್ಮಂಡ ವಿವೇಕ್, ಬಲ್ಲಚಂಡ ಗೌತಮ್, ನಗರ ಸಮಿತಿ ಅಧ್ಯಕ್ಷ ಪಿ.ಎ. ಮಂಜುನಾಥ್, ಮಂಡೇಪಂಡ ಮುತ್ತಪ್ಪ, ಇಟ್ಟೀರ ಸಂಪತ್, ಬಾಳೆ ಕುಟ್ಟೀರ ದಿನಿ, ಚಿಲ್ಲವಂಡ ಗಣಪತಿ, ಪ್ರತಾಪ್, ಪಂದ್ಯಂಡ ರವಿ, ಜಸೀರ್, ಅಯಾಜ್ ಷರೀಫ್, ಮಹಿಳಾ ವಿಭಾಗದ ಸುಮಾ, ಹಾಗೂ ವೀಣಾ ಉಪಸ್ಥಿತರಿದ್ದರು.

ಸಭೆಯಲ್ಲಿ ಮಹಿಳೆಯರು ಸೇರಿದಂತೆ ಒಟ್ಟು 170 ಮಂದಿ ಜೆಡಿಎಸ್ ಪಕ್ಷವನ್ನು ಮುಖಂಡರ ಸಮ್ಮುಖದಲ್ಲಿ ಸೇರ್ಪಡೆಗೊಂಡರು. ಮುಖಂಡರುಗಳು ಇವರುಗಳನ್ನು ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು.