ವೀರಾಜಪೇಟೆ, ಜ. 26: ಭಾರತದಾದ್ಯಂತ 427 ಶಾಖೆಗಳನ್ನು ಹೊಂದಿರುವ ಗೋಕುಲಂ ಫೈನಾನ್ಸ್ ಅಂಡ್ ಚಿಟ್ ಸಂಸ್ಥೆಯನ್ನು ಇಂದು ಅರಮೇರಿ-ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸಿದರು.

ಇಲ್ಲಿನ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರು ರೆ.ವಿ. ಫಾದರ್ ಮದಲೈ ಮುತ್ತು, ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್, ಉಪಾಧ್ಯಕ್ಷೆ ತಸ್ಲೀಂ ಅಕ್ತರ್, ಸದಸ್ಯರುಗಳಾದ ಎಸ್.ಹೆಚ್. ಮೊೈನುದ್ದೀನ್, ಕೆ.ವಿ. ಸಂತೋಷ್, ಎಸ್.ಹೆಚ್. ಮತೀನ್, ರಂಜಿ ಪೂಣಚ್ಚ, ಹರಿಹರನ್ ಮತ್ತಿತರರು ಉಪಸ್ಥಿತರಿದ್ದರು.

ಸಂಸ್ಥೆಯ ಕಾರ್ಯ ನಿರ್ವಾಹಕರುಗಳಾದ ಬೈಜು ಗೋಪಾಲನ್, ವಿ.ಸಿ. ಪ್ರವೀಣ್, ಸಿ.ಪಿ. ಪವಿತ್ರ ಹಾಗೂ ಶಾಖಾ ವ್ಯವಸ್ಥಾಪಕ ಕೆ.ಟಿ. ವಿನೋದ್ ಹಾಜರಿದ್ದರು.