ಸುಂಟಿಕೊಪ್ಪ, ಜ. 25: ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಭಾರತೀಯ ಸೇವಾ ದಿನ ಹಾಗೂ ಸುಭಾಷ್‍ಚಂದ್ರ ಬೋಸ್ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾದ ಸಮಾರಂಭವನ್ನು ಜಿಲ್ಲಾ ಸೇವಾದಳ ಕಾರ್ಯಕ್ರಮ ಆಯೋಜಕ ಉಮೇಶ್ ಉದ್ಘಾಟಿಸಿ, ಮಾತ ನಾಡಿ, ಭಾರತೀಯ ಸೇವಾದಳದಲ್ಲಿ ಒಗ್ಗೂಡುವ ಮೂಲಕ ವಿದ್ಯಾರ್ಥಿ ಗಳ ಜೀವನ ಮಟ್ಟದಲ್ಲಿ ಶಿಸ್ತು, ಆದರ್ಶ ಗುಣ, ಕ್ರೀಯಾಶೀಲತೆ, ಸಜ್ಜನಿಕೆಯನ್ನು ಮೈಗೂಡಿಸಿಕೊಳ್ಳಲು ಸೇವಾದಳವು ಸಹಕಾರಿಯಾಗಲಿದೆ ಎಂದರು. ಸೇವಾದಳದ ಜಿಲ್ಲಾ ಕಾರ್ಯದರ್ಶಿ ಕರುಂಬಯ್ಯ, ಸೋಮವಾರಪೇಟೆ ತಾಲೂಕು ಕಾರ್ಯಕ್ರಮ ಆಯೋಜಕ ಡಿ.ವಿ. ಗಣೇಶ್, ವಲಯ ಕ್ಲಸ್ಟರ್ ಅಧಿಕಾರಿ ಪುರುಷೋತ್ತಮ್, ಶಾಲೆಯ ಮುಖ್ಯ ಶಿಕ್ಷಕಿ ಸಿ.ಎ. ಗೀತಾ, ಸೋಮವಾರಪೇಟೆ ತಾಲೂಕು ಶಿಕ್ಷಕರ ಸಂಘದ ಉಪಾಧ್ಯಕ್ಷೆ ಸೌಭಾಗ್ಯ ಹಾಗೂ ಸುಂಟಿಕೊಪ್ಪ ಸೇವಾದಳ ಕಾರ್ಯಕ್ರಮ ನಿರ್ದೇಶಕ ಪಿ.ಇ. ನಂದ ಮಾತನಾಡಿದರು.