ಡಾ. ಹರಿ ಎ. ಶೆಟ್ಟಿ
ಕುಶಾಲನಗರ, ಜ. 25: ಆರೋಗ್ಯವಂತ ಮಕ್ಕಳ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ರೋಟರಿ ಹಿರಿಯ ಸದಸ್ಯ ಡಾ. ಹರಿ ಎ. ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಶಾಲನಗರ ಇನ್ನರ್ ವ್ಹೀಲ್ ಕ್ಲಬ್, ರೋಟರಿ ಸಂಸ್ಥೆ ಮತ್ತು ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯವಂತ ಮಗು ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ನಿಗಾವಹಿಸುವ ಮೂಲಕ ಹೆಚ್ಚಿನ ಕಾಳಜಿ ಹೊಂದಬೇಕೆಂದರು.
ರೋಟರಿ ಸಹಾಯಕ ರಾಜ್ಯಪಾಲ ಮಹೇಶ್ ನಾಲ್ವಡೆ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ರೋಟರಿ ಸಂಸ್ಥೆ ಅಧ್ಯಕ್ಷ ಎನ್.ಜಿ. ಪ್ರಕಾಶ್, ಇನ್ನರ್ ವ್ಹೀಲ್ ಅಧ್ಯಕ್ಷೆ ರೇಖಾ ಗಂಗಾಧರ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಬಲಂ ಭೋಜಣ್ಣ ರೆಡ್ಡಿ, ರೋಟರಿ ಕಾರ್ಯದರ್ಶಿ ಸಿ.ಬಿ. ಹರೀಶ್, ಕಾರ್ಯಕ್ರಮ ಸಂಯೋಜಕ ಕೆ.ಎಸ್. ಮೂರ್ತಿ, ತೀರ್ಪುಗಾರರಾದ ಡಾ. ಹರಿ ಎ. ಶೆಟ್ಟಿ, ಡಾ. ಕೃಷ್ಣಮೂರ್ತಿ ಪಾಲ್ಗೊಂಡಿದ್ದರು.
ಸುನಿತಾ ಮತ್ತು ರಶ್ಮಿ ಪ್ರಾರ್ಥಿಸಿದರು, ಸುನಿತಾ ನಿರೂಪಿಸಿದರು, ಎಂ.ಡಿ. ರಂಗಸ್ವಾಮಿ ಸ್ವಾಗತಿಸಿದರು, ಎಂ.ಎನ್. ಚಂದ್ರಮೋಹನ್ ವಂದಿಸಿದರು. ಮೂರು ವಿಭಾಗಗಳ ಸ್ಪರ್ಧೆಯಲ್ಲಿ 100 ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು.
ಸ್ಪರ್ಧಾ ವಿಜೇತರು
ಸ್ಥಳೀಯ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಒಟ್ಟು 82 ಸ್ಪರ್ಧಿಗಳು ಪಾಲ್ಗೊಂಡಿದ್ದು, 3 ವಿಭಾಗಗಳಲ್ಲಿ ಸ್ಪರ್ಧೆ ನಡೆದಿದೆ. 6 ತಿಂಗಳಿಂದ 1 ವರ್ಷದ ಒಳಗಿನ ಮಕ್ಕಳಲ್ಲಿ ಪ್ರಥಮ ಸ್ಥಾನವನ್ನು ಡಿ.ಪ್ರಜ್ವಲ್, ಎರಡನೇ ಸ್ಥಾನವನ್ನು ನಿವ್ಯ ಅಶ್ವಿತ್, ಮೂರನೇ ಸ್ಥಾನವನ್ನು ಕೆ.ವಿ. ವಿಸ್ಮಯ ಗಳಿಸಿದ್ದಾರೆ.
1 ರಿಂದ 2 ವರ್ಷ ಪ್ರಾಯದ ಒಳಗಿನ ಮಕ್ಕಳಿಗಾಗಿ ನಡೆದ ಸ್ಪರ್ಧೆಯಲ್ಲಿ ದಿನಿತ ಎಂ.ಡಿ. ಪ್ರಥಮ, ಫೆಸ್ಟಿನ್ ಎ. ಫರ್ನಾಂಡಿಸ್ ದ್ವಿತೀಯ, ಶಾನ್ ಕಿತ್ ಡಿಸೋಜ ಮೂರನೇ ಸ್ಥಾನ ವಿಜೇತರಾಗಿದ್ದಾರೆ.
2 ರಿಂದ 3 ವರ್ಷ ಪ್ರಾಯದ ಮಕ್ಕಳ ನಡುವೆ ನಡೆದ ಸ್ಪರ್ಧೆಯಲ್ಲಿ ರಾನ್ ತಮ್ಮಯ್ಯ ಪ್ರಥಮ, ಸೋನಂ ದೇಚಮ್ಮ ದ್ವಿತೀಯ ಸಾನ್ವಿತ ಪಿ.ಬಿ. ತೃತೀಯ ಸ್ಥಾನ ಗಳಿಸಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಅವಳಿ ಮಕ್ಕಳಾದ ಎ.ಕೆ. ಕರೀನ ಮತ್ತು ಎ.ಕೆ. ಕರೀಷ್ಮಾ ಸಮಧಾನಕರ ಬಹುಮಾನ ಪಡೆದಿದ್ದಾರೆ.
ಈ ಸಂದರ್ಭ ನಡೆದ ಸಮಾರಂಭದಲ್ಲಿ ಮಕ್ಕಳು ಮತ್ತು ಅವರ ಪೋಷಕರಿಗೆ ಹಿಮಾಲಯ ಬೇಬಿ ಕೇರ್ ಸಂಸ್ಥೆ ವತಿಯಿಂದ ಬಹುಮಾನಗಳು ಮತ್ತು ಪ್ರಶಸ್ತಿಪತ್ರ ವಿತರಿಸಲಾಯಿತು.