ಮಡಿಕೇರಿ, ಜ. 25: ಸರ್ಕಾರಿ ಪ್ರೌಢಶಾಲೆ ಕಾನ್‍ಬೈಲ್‍ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಕ್ರೀಡಾ ದಿನವನ್ನು ಆಚರಿಸಲಾಯಿತು. ಕ್ರೀಡಾಕೂಟದ ಧ್ವಜಾರೋಹಣವನ್ನು ನೀಲಮ್ಮ ಪೆಮ್ಮಯ್ಯ ನೆರವೇರಿಸಿದರು.
ಕ್ರೀಡಾಜ್ಯೋತಿಯನ್ನು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಂಕರನಾರಾಯಣ ಬೆಳಗಿಸಿದರು. ಕಾನ್‍ಬೈಲ್ ಎಸ್ಟೇಟ್‍ನ ವ್ಯವಸ್ಥಾಪಕ ವಿ.ಸಿ. ಹೆಗಡೆ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವೆಂಕಟೇಶ್ ಅವರು ಮಾತನಾಡಿದರು.
ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಚಂದ್ರಶೇಖರ್, ಸತೀಶ್ ಭಾಗವಹಿಸಿ ಮಕ್ಕಳಿಗೆ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು. ಶಾಲಾ ದೈಹಿಕ ಶಿಕ್ಷಕಿ ಜಿ.ಕೆ. ಪಾರ್ವತಿ ನೇತೃತ್ವದಲ್ಲಿ ಪಥಸಂಚಲನ ಮತ್ತು ಪಂದ್ಯಾಟಗಳು ನೆರವೇರಿದವು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಮಂಜೇಶ್ ಮತ್ತು ಶಿಕ್ಷಕರಾದ ದಿನೇಶ್ ನಾಯ್ಕ, ಸುಮಾ, ಲತಾ ವಿ ಪೈ, ನವೀನ್ ಕುಮಾರ್, ಮಾಲಾದೇವಿ ಹಾಜರಿದ್ದರು.