ಕುಶಾಲನಗರ, ಜ. 25: ಶತಮಾನದ ಐತಿಹಾಸಿಕ ಶ್ರೀ ಗಣಪತಿ ದೇವಾಲಯದ ಹಳೆಯ ರಥವನ್ನು ಕುಶಾಲನಗರ ಸಮೀಪದ ಕೊಪ್ಪ ಗ್ರಾಮದ ಶ್ರೀ ಚೆನ್ನಕೇಶವಸ್ವಾಮಿ ದೇವಾಲಯಕ್ಕೆ ದಾನವಾಗಿ ನೀಡಲಾಯಿತು.ಚೆನ್ನಕೇಶವ ದೇವಾಲಯದ ಆಡಳಿತ ಮಂಡಳಿ ಕೋರಿಕೆ ಮೇರೆಗೆ ಐತಿಹಾಸಿಕ ಹಳೆಯ ರಥವನ್ನು ಸಾಂಪ್ರದಾಯಿಕವಾಗಿ ಹಸ್ತಾಂತರಿಸಲಾಯಿತು ಎಂದು ಶ್ರೀ ಗಣಪತಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ವಿ.ಎನ್. ವಸಂತ ಕುಮಾರ್ ತಿಳಿಸಿದ್ದಾರೆ.