ಪೊನ್ನಂಪೇಟೆ, ಜ. 23: ಕೊಡವ ಮುಸ್ಲಿಂ ಅಸೋಸಿಯೇಷನ್ ವತಿಯಿಂದ 40ನೇ ವರ್ಷಾಚರಣೆಯ ಅಂಗವಾಗಿ ಹೊರತರಲಾದ 2018ನೇ ಸಾಲಿನ ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ವೀರಾಜಪೇಟೆಯ ಡಿ.ಹೆಚ್.ಎಸ್. ಕಟ್ಟಡದಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್‍ನ ಸ್ಥಾಪಕ ಅಧ್ಯಕ್ಷ, ಹಿರಿಯ ಪತ್ರಕರ್ತ ಕುವೇಂಡ ವೈ ಹಂಝತುಲ್ಲಾ, ಮುಂಬೈ ಉದ್ಯಮಿ ಅಕ್ಕಳತಂಡ ಎಸ್. ಮೊಯಿದು ಮತ್ತು ಗೋಣಿಕೊಪ್ಪಲಿನ ಉದ್ಯಮಿ ಚಿಮ್ಮಿಚ್ಚಿರ ಕೆ. ಇಬ್ರಾಹಿಂ ಪ್ರಾಯೋಜಿಸಿರುವ ಕ್ಯಾಲೆಂಡರನ್ನು ಬಿಡುಗಡೆಗೊಳಿಸಿದರು.

ಹಿರಿಯ ನಿರ್ದೇಶಕ ಚಿಮ್ಮಿಚ್ಚಿರ ಎ. ಅಬ್ದುಲ್ಲಾ ಹಾಜಿ, ನಿರ್ದೇಶಕರಾದ ಪೊಯಕೇರ ಎಸ್. ಮೊಹಮ್ಮದ್ ರಫೀಕ್, ಕುಪ್ಪಂದಿರ ಎಂ. ಯಾಹ್ಯ, ಕುರಿಕಡೆರ ಎ. ಅಬ್ದುಲ್ ಸಮದ್, ಸಹ ಕಾರ್ಯದರ್ಶಿ ಮಂಡೇಡ ಎ. ಮೊಯ್ದು ಮೊದಲಾದವರು ಉಪಸ್ಥಿತರಿದ್ದರು. ಕೆ.ಎಂ.ಎ. ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ ಸ್ವಾಗತಿಸಿ, ವಂದಿಸಿದರು.