ಸೋಮವಾರಪೇಟೆ, ಜ. 23: ಪ್ರತಿಯೊಂದು ಸೇವಾ ಸಂಸ್ಥೆಗಳು ಪಟ್ಟಣ ಪ್ರದೇಶಗಳಿಗೆ ಮಾತ್ರ ಸೀಮಿತವಾಗದೇ ಗ್ರಾಮೀಣ ಪ್ರದೇಶದ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸ ಬೇಕೆಂದು ಉದ್ಯಮಿ ಕಿರಣ್ ಕಾಳಪ್ಪ ಹೇಳಿದರು.

ಇಲ್ಲಿನ ಪುಷ್ಪಗಿರಿ ಜೇಸಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದು ಗ್ರಾಮೀಣ ಭಾಗದ ಜನರ ಆರ್ಥಿಕ ಮಟ್ಟ ದುಸ್ಥಿತಿಯಲ್ಲಿದೆ. ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಮೂಲ ಭೂತ ಸೋಮವಾರಪೇಟೆ, ಜ. 23: ಪ್ರತಿಯೊಂದು ಸೇವಾ ಸಂಸ್ಥೆಗಳು ಪಟ್ಟಣ ಪ್ರದೇಶಗಳಿಗೆ ಮಾತ್ರ ಸೀಮಿತವಾಗದೇ ಗ್ರಾಮೀಣ ಪ್ರದೇಶದ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸ ಬೇಕೆಂದು ಉದ್ಯಮಿ ಕಿರಣ್ ಕಾಳಪ್ಪ ಹೇಳಿದರು.

ಇಲ್ಲಿನ ಪುಷ್ಪಗಿರಿ ಜೇಸಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದು ಗ್ರಾಮೀಣ ಭಾಗದ ಜನರ ಆರ್ಥಿಕ ಮಟ್ಟ ದುಸ್ಥಿತಿಯಲ್ಲಿದೆ. ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಮೂಲ ಭೂತ ಮಾತನಾಡಿ, ಬದಲಾವಣೆ ಜಗತ್ತಿನ ನಿಯಮ, ಬದಲಾವಣೆ ನನ್ನಿಂದಲೆ ಸಾಧ್ಯ ಎಂಬ ದೃಢ ನಿರ್ಧಾರವನ್ನು ಕೈಗೊಂಡು ಜೀವನದ ಉದ್ದೇಶಗಳನ್ನು ಈಡೇರಿಸಲು ಮುಂದಾಗಬೇಕು ಎಂದರು.

ಇದೇ ಸಂದರ್ಭ 2017-18ರ ಸಾಲಿನ ನೂತನ ಅಧ್ಯಕ್ಷರಾಗಿ ಕೆ.ಎ. ಪ್ರಕಾಶ್, ಕಾರ್ಯದರ್ಶಿಯಾಗಿ ಎಂ.ಎ. ರುಬೀನಾ, ಜೇಸಿ ರೇಟ್ಸ್ ಅಧ್ಯಕ್ಷರಾಗಿ ಮಹೇಶ್ವರಿ ಗಿರೀಶ್, ಕಾರ್ಯದರ್ಶಿ ಶೈಲಾ ವಸಂತ್, ಪದಾಧಿಕಾರಿಗಳಾಗಿ ಆರ್. ಮಂಜುನಾಥ್, ಮೀನಾ ಮಂಜುನಾಥ್, ಎಂ.ಪಿ. ರಾಜೇಶ್, ಮಂಜುಳಾ ಸುಬ್ರಮಣಿ, ಎಸ್.ಆರ್. ವಸಂತ್, ಉಷಾರಾಣಿ, ಎಂ.ಜೆ. ಮಂಜುನಾಥ್, ಪುರುಷೋತ್ತಮ ಅವರುಗಳು ಪ್ರಮಾಣವಚನ ಸ್ವೀಕರಿಸಿದರು.

ವೇದಿಕೆಯಲ್ಲಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ಮನೋಹರ್, ವಲಯ 14ರ ಉಪಾಧ್ಯಕ್ಷ ದರ್ಶನ್ ಉಪಸ್ಥಿತರಿದ್ದರು.