ಮಡಿಕೇರಿ, ಜ. 23: ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಬಿ. ಶಿವಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾಜದ ಸಭೆಯಲ್ಲಿ ಮಡಿಕೇರಿ ತಾಲೂಕು ಸಮಿತಿಯನ್ನು ಪುನರ್ ರಚಿಸಲಾಗಿದೆ.
ಅಧ್ಯಕ್ಷರಾಗಿ ಪಿ.ಬಿ. ಸುರೇಶ್, ಉಪಾಧ್ಯಕ್ಷರಾಗಿ ಪಿ.ಸಿ. ರಘು ಕಾರ್ಯದರ್ಶಿಯಾಗಿ ವಿಶ್ವನಾಥ್, ಸಹ ಕಾರ್ಯದರ್ಶಿಯಾಗಿ ಕುಮಾರ್ ಉಡೋತ್, ಖಜಾಂಚಿಯಾಗಿ ಪ್ರಕಾಶ್, ಸಲಹೆಗಾರರಾಗಿ ಜನಾರ್ಧನ, ತಾಲೂಕು ಸಂಚಾಲಕರಾಗಿ ವಿವೇಕ್ ಹಾಗೂ ಜಿಲ್ಲಾ ಸಂಚಾಲಕರಾಗಿ ಪಿ.ಬಿ. ಜನಾರ್ಧನ ಆಯ್ಕೆಯಾಗಿದ್ದಾರೆ. ನಗರದ ಅರಸು ಭವನದಲ್ಲಿ ನಡೆದ ಸಭೆಯಲ್ಲಿ ಸ್ಥಾಪಕ ಅಧ್ಯಕ್ಷ ಸದಾನಂದ ಮಾಸ್ಟರ್, ಗೌರವಾಧ್ಯಕ್ಷ ಪಿ.ಎಂ. ರವಿ. ಉಪಸ್ಥಿತರಿದ್ದರು. ಪಿ.ಬಿ. ಜನಾರ್ಧನ ಕಾರ್ಯಕ್ರಮ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಚಂದ್ರ ಸ್ವಾಗತಿಸಿ, ದಿನೇಶ್ ಉಡೋತ್ ವಂದಿಸಿದರು.