ಮಡಿಕೇರಿ, ಜ. 19: ಕೊಡವರ ಶ್ರೀಮಂತ ಜಾನಪದ ಖಜಾನೆ ಮುಂದಿನ ಪೀಳಿಗೆಗೆ ಹಸ್ತಾಂತರಿಸಲ್ಪಡಬೇಕು ಹಾಗೂ ಈ ನೆಲ ರಿಯಲ್ ಎಸ್ಟೇಟ್ ಮಾಫಿಯಾ ಕೈ ಸೇರಬಾರದು ಎಂಬ ಹಿರಿಯ ಸಂಶೋಧಕ ಡಾ. ಕಾಳೇಗೌಡ ನಾಗವಾರ ಅವರ ಹೇಳಿಕೆಯನ್ನು ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಸ್ವಾಗತಿಸಿದ್ದಾರೆ.

ಸೂರ್ಲಬ್ಬಿಯಲ್ಲಿ ಇತ್ತೀಚೆಗೆ ಕಾಳೇಗೌಡ ಅವರು ಕೊಡಗಿನ ಸಂಸ್ಕøತಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದನ್ನು ಹೇಳಿಕೆಯಲ್ಲಿ ಪ್ರಸ್ತಾಪಿಸಿರುವ ನಾಚಪ್ಪ, ಇದೀಗ ಸಿದ್ದರಾಮಯ್ಯ ಸರ್ಕಾರ ಸ್ಥಗಿತಗೊಳಿಸಿರುವ ಕೊಡವ ಕುಲಶಾಸ್ತ್ರ ಅಧ್ಯಯನವನ್ನು ಪುನಃ ಆರಂಭಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಒತ್ತಾಯಿಸಿದ್ದಾರೆ.