ಮಡಿಕೇರಿ, ಜ. 18: ಉಳ್ಳಿಯಡ ರಾಘವ್ ಮಂದಣ್ಣ ಹಾಗೂ ಯಶಸ್ ಮಾವಿನಕೆರೆ ನಿರ್ದೇಶಿಸಿರುವ ‘ಟ್ರಿಪ್ಪರ್ ವ್ಯಾಲಿ’ ಕನ್ನಡ ಕಿರುಚಿತ್ರ ಯೂಟ್ಯೂಬ್‍ನಲ್ಲಿ ಬಿಡುಗಡೆಗೊಂಡಿದೆ. ಶಬ್ದವಿನ್ಯಾಸ ಹಾಗೂ ಸಂಗೀತವನ್ನು ಕೆಚ್ಚೆಟ್ಟಿರ ಅನಿಶ್ ಪೊನ್ನಣ್ಣ ನೀಡಿದ್ದು, ಮುಖ್ಯಪಾತ್ರದಲ್ಲಿ ರಾಘವ್ ಮಂದಣ್ಣ, ಯಶಸ್ ಮಾವಿನಕೆರೆ ಹಾಗೂ ಪೋರೇರ ಬ್ರವೀನ್ ತಮ್ಮಯ್ಯ ನಟಿಸಿದ್ದಾರೆ. ರೋಚ್ ಪೇಪರ್ ಸೀಜರ್ ಚಾನಲ್ ಮೂಲಕ ವೀಕ್ಷಿಸಬಹುದಾಗಿದೆ.