ಗೋಣಿಕೊಪ್ಪ ವರದಿ, ಜ. 18 : ಬುಡಕಟ್ಟು ಜನಾಂಗ ಪ್ರಾಕೃತಿಕ ಸಂಪತ್ತನ್ನು ಬದುಕಿಗೋಸ್ಕರ ಮಿತ ವಾಗಿ ಬಳಸಿಕೊಂಡಿರು ವದರಿಂದ ಪ್ರಕೃತಿಯ ಮೇಲೆ ದುಷ್ಪರಿಣಾಮ ಉಂಟಾಗಿಲ್ಲ ಎಂದು ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನಿ ಡಾ. ಡೆನಿಯಲ್ ಅಭಿಪ್ರಾಯಪಟ್ಟರು.

ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯಲಿ ರುವ ‘ವಿಶ್ವ ಬುಡಕಟ್ಟು ಕಲ್ಪನೆಯಲ್ಲಿ ಕೊಡಗಿನ ಬುಡಕಟ್ಟು ಜನಾಂಗಗಳು’ ವಿಚಾರ ಸಂಕಿರಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೊಡಗಿನ ಬುಡಕಟ್ಟು ಜನಾಂಗಗಳ ಸಾಮಾಜಿಕ, ಸಾಂಸ್ಕøತಿಕ ಹಾಗೂ ಧಾರ್ಮಿಕ ನಂಬಿಕೆಗಳು ವಿಷಯದ ಬಗ್ಗೆ ವಿಚಾರ ಮಂಡಿಸಿದ ಅವರು ನಗರದ ಬದುಕಿಗೆ ಹಾಗೂ ಅರಣ್ಯದೊಳಗಿನ ಬದುಕಿಗೆ ಅಪಾರ ವ್ಯತ್ಯಾಸವಿದೆ.

ನಾಗರಿಕ ಸಮಾಜದಿಂದ ದೂರ ವಿದ್ದರೂ ಬುಡ ಕಟ್ಟು ಜನಾಂಗ ಗಳನ್ನು ಏಕಾಂಗಿ ಮನೋಭಾವ ಕಾಡಿಲ್ಲ. ಜನಾಂಗ ಒಟ್ಟಾಗಿ ಬದುಕಿ ತೃಪ್ತಿ ಪಡುತ್ತಿದ್ದಾರೆ. ಜೀವಿ ಸಲು ಬೇಕಾಗುವ ಕನಿಷ್ಟ ಬೇಡಿಕೆಗಳ ಮಿತಿಯನ್ನು ಅರಿತುಕೊಂಡು ಸಂತುಷ್ಟರಾಗಿದ್ದಾರೆ ಎಂದರು. ಬುಡಕಟ್ಟು ಜನಾಂಗಗಳು ಅನುಸರಿಸಿರುವ ಜೀವನ ಕ್ರಮಗಳಾದ ಬೇಟೆ ಹಾಗೂ ಕಾಡಿನ ಉತ್ಪನ್ನಗಳ ಸಂಗ್ರಹ ಪ್ರಾಕೃತಿಕ ಸಮತೋಲನ ವನ್ನು ಹಾಳು ಮಾಡಿಲ್ಲ ಎಂದರು.

ದುಡಿ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ನವದೆಹಲಿ ಯುನಿವರ್ಸಿಟಿ ಪ್ರೊ. ಡಾ. ಸುಧೀರ್ ಸಿಂಗ್ ಜನಾಂಗಗಳು ವೈವಿಧ್ಯತೆಯ ಸಂಕೇತ. ಭಾರತದಲ್ಲಿ ಬುಡಕಟ್ಟು ಜನಾಂಗದ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಆಸ್ಟ್ರೇಲಿಯಾ ದೇಶದ ಬುಡಕಟ್ಟು ಜನಾಂಗಗಳಿಗೆ ಹೋಲಿಕೆ ಮಾಡಿದರೆ ಭಾರತದ ಬುಡ ಕಟ್ಟು ಜನಾಂಗದ ಪರಿಸ್ಥಿತಿ ಉತ್ತಮ ವಾಗಿದೆ ಎಂದರು.

ಪ್ರೊ. ರಜನಿ ಜಯರಾಮ್ ಮಾತನಾಡಿ, ಬುಡಕಟ್ಟು ಜನಾಂಗಗಳ ಜನಜೀವನ ಪೂರ್ವದಲ್ಲಿ ಹೇಗಿತ್ತು ಎಂಬುದರ ಬಗ್ಗೆ ಚಿಂತಿಸುವದಕ್ಕಿಂತ ಪ್ರಸ್ತುತ ಪರಿಸ್ಥಿತಿ ಹಾಗೂ ಭವಿಷ್ಯದಲ್ಲಿ ಅವರ ಜೀವನ ಕ್ರಮದಲ್ಲಿ ಉಂಟಾಗ ಬಹುದಾದ ಬದಲಾವಣೆಗಳ ಬಗ್ಗೆ ಚಿಂತಿಸಬೇಕಿದೆ ಎಂದರು.

ಕೊಡಗಿನ ಬುಡಕಟ್ಟು ಜನಾಂಗಗಳು ಉಳಿಯ ಬೇಕಾದರೆ ಅರಣ್ಯದೊಳಗಿರುವ ಜನಾಂಗಗಳನ್ನು ಕಡೆಗಣಿಸುವದನ್ನು ಬಿಟ್ಟು ಅವರಿಗಾಗಿ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ ಎಂದರು. ಜಿ.ಪಂ. ಸದಸ್ಯೆ ಪಂಕಜ ಮಾತನಾಡಿ, ಕೊಡಗಿನ ಬುಡಕಟ್ಟು ಜನಾಂಗ ಹಾಡಿ, ಪೈಸಾರಿ, ಲೈನ್‍ಮನೆ ಹಾಗೂ ಕಾಲೋನಿಗಳಲ್ಲಿ ಚದುರಿ ಹೋಗಿದ್ದಾರೆ. ಆದರೂ ಅವರಿಗೆ ಮೂಲಭೂತ ಸೌಲಭ್ಯಗಳು ಲಭಿಸಿದೆ. ಜಿಲ್ಲೆಯ ಹೊರಗಿನ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರ ಮಾಡಿರುವದು ಜನಾಂಗದ ಭಾಷೆ ಹಾಗೂ ಸಂಸ್ಕøತಿಯ ನಾಶಕ್ಕೆ ಕಾರಣವಾಗಿದೆ.

ಕೊಡಗಿನ ಬುಡಕಟ್ಟು ಜನಾಂಗ ಗಳಿಗೆ ಜಿಲ್ಲೆಯಲ್ಲಿಯೇ ಪುನರ್ವಸತಿ ಕಲ್ಪಿಸಬೇಕು. ಅವರ, ಭಾಷೆ, ಸಂಸ್ಕøತಿ ಪೋಷಣೆಗೆ ಮುಂದಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡೀನ್ ಸಿ.ಜಿ ಕುಶಾಲಪ್ಪ, ಡಾ. ಜಡೇಗೌಡ, ತಾ.ಪಂ. ಸದಸ್ಯ ಪ್ರಕಾಶ್, ಡಾ. ಗುರು ಬಸವರಾಜ ಸ್ವಾಮಿ ಪಂಡಿತ, ಪ್ರೊ. ಸಿದ್ದಲಿಂಗಸ್ವಾಮಿ ಉಪಸ್ಥಿತರಿದ್ದರು. ಗೋಣಿಕೊಪ್ಪ ಕಾವೇರಿ ಕಾಲೇಜು ಮತ್ತು ಮಡಿಕೇರಿ ಫೀ.ಮಾ. ಕಾರ್ಯಪ್ಪ ಕಾಲೇಜುವಿನ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.