ಚೆಟ್ಟಳ್ಳಿ, ಜ.18: ಚೆಟ್ಟಳ್ಳಿಯ ಕೆಕೆಎಫ್‍ಸಿ ಫುಡ್‍ಬಾಲ್ ಕ್ಲಬ್ ವತಿಯಿಂದ 5ನೇ ವರ್ಷದ ಕಾಲ್ಚೆಂಡು (ಫುಟ್ಬಾಲ್) ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಫೆಬ್ರವರಿ8ರಿಂದ ಫೆಬ್ರವರಿ 11ರವರೆಗೆ ಚೆಟ್ಟಳ್ಳಿಯ ಪ್ರೌಢಶಾಲಾ ಮೈಧಾನದಲ್ಲಿ ಜಿಲ್ಲಾಮಟ್ಟದ 5ನೇ ವರ್ಷದ ಮುಕ್ತ 9+3ಆಟಗಾರರ ಕಾಲ್ಚೆಂಡು ಪಂದ್ಯಾಟವನ್ನು ಆಯೋಜಿಸಲಾಗಿದ್ದು ಫೆಬ್ರವರಿ 11ರ ಭಾನುವಾರ ಅಂತಿಮ ಪಂದ್ಯಾಟವಿದ್ದು ಪ್ರಥಮ ಹಾಗೂ ದ್ವಿತೀಯ ವಿಜೇತರಿಗೆ ಆಕರ್ಶಕ ಟ್ರೋಫಿ ನಗದು ಹಾಗೂ ವೈಯಕ್ತಿಕ ಬಹುಮಾನ, ತೃತೀಯ ವಿಜೇತರಿಗೆ ಟ್ರೋಫಿ ನೀಡಲಾಗುವದು. ಚೆಟ್ಟಳ್ಳಿಯ 7ನೇ ಹಾಗೂ 10ನೇ ತರಗತಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಮಹಿಳಾ ಫುಟ್ಬಾಲ್ ತಂಡದಿಂದ ಪ್ರದರ್ಶನ ಪಂದ್ಯಾಟ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9632653641, 8277560862ಸಂಪರ್ಕಿಸಬಹುದು.