ನಾಪೆÇೀಕ್ಲು, ಜ. 18: ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷೆ ಮಾಂಗೆರ ಪದ್ಮಿನಿ ಪೆÇನ್ನಪ್ಪ ನಾಪೆÇೀಕ್ಲು ಪ್ರವಾಸಿ ಮಂದಿರದಲ್ಲಿ ಫಲಾನುಭವಿಗಳಿಗೆ ಸೋಲಾರ್ ದೀಪ ವಿತರಿಸಿದರು. ಈ ಸಂದರ್ಭ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಎ. ಮಹಮ್ಮದ್, ಆಮಿನಾ, ನಾಪೆÇೀಕ್ಲು ವಲಯ ಕಾಂಗ್ರೆಸ್ ಅಧ್ಯಕ್ಷ ಮಾಚೇಟಿರ ಕುಶು ಕುಶಾಲಪ್ಪ, ಮತ್ತಿತರರು ಇದ್ದರು.