ವೀರಾಜಪೇಟೆ, ಜ. 18: ಶ್ರೀ ಕಂಚಿ ಕಾಮಾಕ್ಷಿ ದೇವಾಲಯದ ವಾರ್ಷಿಕೋತ್ಸವ ಸಮಾರಂಭವನ್ನು ಆಚರಿಸಲಾಯಿತು. ವೀರಾಜಪೇಟೆ ನಗರದ ಮಲಬಾರ್ ರಸ್ತೆಯಲ್ಲಿರುವ ಅತಿ ಪುರಾತನ ಶ್ರೀ ಕಂಚಿ ಕಾಮಾಕ್ಷಿ ದೇವಾಲಯ ಪುನರ್ ನಿರ್ಮಾಣಗೊಂಡು 5 ವರ್ಷಗಳು ಸಂದಿರುವ ಅಂಗವಾಗಿ ವಾರ್ಷಿಕ ಪೂಜಾ ಮಹೋತ್ಸವ ಹಲವು ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ನಡೆಯಿತು.

ದೇವಾಲಯದ ಅರ್ಚಕರಿಂದ ಗಣಪತಿ ಹೋಮದೊಂದಿಗೆ ಅರಂಭವಾದ ಪೂಜೆಗಳು ಸುಮಂಗಲೆಯರ ಮಾಂಗಲ್ಯ ಭಾಗ್ಯಕ್ಕಾಗಿ ದುರ್ಗಾಪೂಜೆ ಹಾಗೂ ಸರ್ವ ಅಲಂಕಾರಗಳೊಂದಿಗೆ ಮಹಾಪೂಜೆ ನೆರೆವೇರಿಸಲಾಯಿತು. ದೇಗುಲದ ಆಡಳಿತ ಮಂಡಳಿಯ ವತಿಯಿಂದ ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ಆಡಳಿತ ಮಂಡಳಿಯ ಜಿ.ಜಿ. ನಾರಾಯಣ ಸ್ವಾಮಿ, ಜಿ.ಜಿ. ಬಾಲಕೃಷ್ಣ, ಜಿ.ಜಿ. ಮೋಹನ್, ಜಿ,ಜಿ. ಚಿನ್ನಯ್ಯ ಹಾಗೂ ನಗರದ ವಿವಿಧೆಡೆಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಿ ದೇವಿಯ ಕೃಪೆಗೆ ಪಾತ್ರರಾದರು.