ಕಾವೇರಮ್ಮ ಸೋಮಣ್ಣ
ಭಾಗಮಂಡಲ, ಜ. 18: ಪೋಷಕರಿಂದ ಮಕ್ಕಳಿಗೆ ತಪ್ಪು ಸಂದೇಶ ಹೋಗದಂತೆ ನೋಡಿಕೊಳ್ಳುವದು ತಂದೆ-ತಾಯಿಯರ ಕರ್ತವ್ಯ ಎಂದು ಮಡಿಕೇರಿ ನಗರಸಭಾಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಹೇಳಿದರು.
ಚೆಟ್ಟಿಮಾನಿಯ ಸಾಂದೀಪನಿ ವಿದ್ಯಾಪೀಠದ ವತಿಯಿಂದ ಏರ್ಪಡಿಸಲಾಗಿದ್ದ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಇಂಗ್ಲೀಷ್ ಕಲಿಕೆಯೊಂದಿಗೆ ತಾಯಿ ಭಾಷೆ, ಮಾತೃಭಾಷೆಗೂ ಮಹತ್ವ ನೀಡಬೇಕೆಂದರು. ಸಭೆಯಲ್ಲಿ ಉಪಸ್ಥಿತರಿದ್ದ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರಶೇಖರ್ ಮಾತನಾಡಿ, ಚಿಕ್ಕಂದಿನಲ್ಲಿ ಮಾಡಿದ ತಪ್ಪಿನ ಅರಿವಾದಾಗ ಜೀವನಕ್ಕೆ ಸರಿಯಾದ ದಾರಿಯನ್ನು ಕಂಡುಕೊಳ್ಳಬಹುದು ಎಂದರು.
ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮೂಡಗದ್ದೆ ವಿಜಯೇಂದ್ರ ವಹಿಸಿದ್ದರು. ಸಭೆಯಲ್ಲಿ ನಿವೃತ್ತ ಶಿಕ್ಷಕಿ ಶಿವದೇವಿ ಅವನೀಶ್ಚಂದ್ರ, ಕುಂದಚೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಪ್ರಕಾಶ್, ಸಿಆರ್‍ಪಿ ಎ.ಎಸ್. ಶ್ರೀಧರ್ ಉಪಸ್ಥಿತರಿದ್ದರು. ಶಿಕ್ಷಕಿ ಸುನಿತಾ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಕವಿತಾ ವರದಿ ವಾಚಿಸಿದರು, ಶಿಕ್ಷಕಿ ಅಕ್ಕವ್ವ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ಮಕ್ಕಳ ನೃತ್ಯ ಗಮನಸೆಳೆಯಿತು.