ಆಲೂರು-ಸಿದ್ದಾಪುರ, ಜ. 18: ಮಾಲಂಬಿ ಉಪ ಅಂಚೆ ಕಚೇರಿಯಲ್ಲಿ ಕಳೆದ 44 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಅಂಚೆ ಪೇದೆ ಪಿ.ಜೆ. ನಾಣಯ್ಯ ಅವರನ್ನು ಶನಿವಾರಸಂತೆ ಸಹಾಯಕ ಅಂಚೆ ಕಚೇರಿ ವತಿಯಿಂದ ಬೀಳ್ಕೊಡಲಾಯಿತು.
ಮಾಲಂಬಿ ಗ್ರಾಮದ ನಿವಾಸಿಯಾದ ಪಳಂಗೋಟು ನಾಣಯ್ಯ ಅವರನ್ನು ಸೋಮವಾರಪೇಟೆ ಅಂಚೆ ನಿರೀಕ್ಷಕ ಹೆಚ್.ಎನ್. ದೀಪಕ್ ಸನ್ಮಾನಿಸಿದರು. ಸಮಾರಂಭದಲ್ಲಿ ಅಂಚೆ ಮೇಲ್ವಿಚಾರಕ ಕೆ.ಎ. ರಾಧಕೃಷ್ಣ, ಬಿ.ಎ. ಭಾಸ್ಕರ್, ಶನಿವಾರಸಂತೆ ಅಂಚೆ ಕಚೇರಿಯ ಸಿಬ್ಬಂದಿಗಳು ಹಾಜರಿದ್ದರು.