ಮಡಿಕೇರಿ, ಜ. 18: ಯೋಗದಿಂದ ಆರೋಗ್ಯದ ಜೊತೆಗೆ ಆತ್ಮಾಭಿಮಾನವನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು ಮೈಸೂರಿನ ಪರಮಹಂಸ ಯೋಗ ತೆರಫಿ ಸಂಸ್ಥೆಯ ಸ್ಥಾಪಕ ನಿರ್ದೇಶಕ ಡಾ. ಎ.ಆರ್. ಸೀತಾರಾಮ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಮಾನವಪ್ರಜ್ಞೆ ಮತ್ತು ಯೋಗವಿಜ್ಞಾನ ವಿಭಾಗ ವತಿಯಿಂದ ಧರ್ಮನಿಧಿ ಯೋಗಪೀಠ ಎಂಬ ಪ್ರಚಾರೋಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಯೋಗಕ್ಕೆ ಹೆಚ್ಚು ಮಾನ್ಯತೆಗಳಿದ್ದು, ದೇಶದ್ಯಾಂತ ಪ್ರಸಿದ್ಧಿ ಪಡೆದಿದೆ. ಯೋಗದಿಂದ ಬುದ್ಧಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಬುಹುದು ಜೊತೆಗೆ ಭಗವದ್ಗೀತೆ, ಬೈಬಲ್, ಕುರಾನ್‍ಗಳನ್ನು ಓದುವ ಮೂಲಕ ತಮ್ಮ ಒತ್ತಡಗಳನ್ನು ದೂರ ಮಾಡಲು ಸಾಧ್ಯ. ಏಕಗ್ರಾತೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಯೋಗದಿಂದ ದೇಹದ ಸಮಸ್ಯೆಗಳಿಂದ ದೂರವಿರಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಈ ಸಂದರ್ಭ ಡಾ. ಸೀತಾರಾಮ್ ವಿದ್ಯಾರ್ಥಿಗಳೊಂದಿಗೆ ಯೋಗ ಪ್ರದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪರಮಹಂಸ ಯೋಗ ತೆರಫಿ ಸಂಸ್ಥೆಯ ಪ್ರಮುಖ ಮಹೇಶ್, ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.