ಗೋಣಿಕೊಪ್ಪ ವರದಿ, ಜ. 18: ಕೊಡಗು ಹಿಂದೂ ಮಲಯಾಳಿ ಸಮಾಜ ಅಸ್ತಿತ್ವಕ್ಕೆ ತರಲಾಗಿದ್ದು, ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ತೊಡಗಿಸಿಕೊಳ್ಳುವಂತೆ ನಿರ್ಧರಿಸಲಾಯಿತು.
ಇಲ್ಲಿನ ಪ್ರಕಾಶ್ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಹಿಂದೂ ಮಲಯಾಳಿ ಜನಾಂಗದ ಹಿರಿಯರ ಮುಂದಾಳತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 160 ಕುಟುಂಬದವರು ಪಾಲ್ಗೊಂಡಿದ್ದರು.
ಜನಾಂಗದ ಸದಸ್ಯರಲ್ಲಿ ಸಾಮಾಜಿಕ ಅಭಿವೃದ್ಧಿ, ಚಾರಿತ್ರಿಕ ಬೆಳವಣಿಗೆ, ಶಿಕ್ಷಣ, ವಿಜ್ಞಾನ, ಸಾಂಸ್ಕøತಿಕ, ಸಾಹಿತ್ಯ ಅಥವಾ ಲಲಿತ ಕಲೆಗಳ ಅಭಿವೃದ್ಧಿಗಾಗಿ ಪ್ರೋತ್ಸಾಹ ನೀಡುವದು, ಕ್ರೀಡಾ ಪ್ರತಿಭೆ, ವಾಣಿಜ್ಯ, ಕೈಗಾರಿಕಾ ಅಥವಾ ಇತರ ಯಾವದೇ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಂತೆ ಉಪಯುಕ್ತ ಶಿಕ್ಷಣ ನೀಡುವದು, ಶೈಕ್ಷಣಿಕವಾಗಿ ಹೆಚ್ಚು ಅಂಕ ಗಳಿಸಿದವರಿಗೆ ಪ್ರೋತ್ಸಾಹ ಧನ ನೀಡುವದು, ವೈದ್ಯಕೀಯ ನೆರವು, ಸಾರ್ವಜನಿಕವಾಗಿ ಹಬ್ಬ ಆಚರಿಸುವದು, ಸಂಸ್ಕøತಿ ಪೋಷಣೆ ಹಾಗೂ ಜನಾಂಗದವರಿಗೆ ಕ್ರೀಡಾಕೂಟ ಆಯೋಜಿಸುವಂತೆ ನಿರ್ಧರಿಸಲಾಯಿತು.
ಸಮಿತಿಗೆ ಆಯ್ಕೆ: ಈ ಸಂದರ್ಭ ನೂತನವಾಗಿ ಸಮಿತಿಗೆ ಆಯ್ಕೆ ನಡೆಸಲಾಯಿತು. ಅಧ್ಯಕ್ಷರಾಗಿ ಪಿ.ಎಸ್. ಶರತ್‍ಕಾಂತ್, ಕಾರ್ಯದರ್ಶಿಯಾಗಿ ರೀನಾ ಉಮೇಶ್, ಖಜಾಂಚಿಯಾಗಿ ವಿ.ವಿ. ಅರುಣ್‍ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಗೌರವ ಅಧ್ಯಕ್ಷರಾಗಿ ಭಾಸ್ಕರ್, ಉಪಾಧ್ಯಕ್ಷರುಗಳಾಗಿ ರಾಜೇಶ್ ಕೆ.ಪಿ. ಪ್ರಶಾಂತ್, ಜಿ. ಮುಕುಂದ್, ಜಯಶ್ರೀ ಕೃಷ್ಣ, ವಿಮಲಾ ರಾಜಮಣಿ, ಜಂಟಿ ಕಾರ್ಯದರ್ಶಿಯಾಗಿ ರಜಿತ್, ಶಾಜಿ ಅಚ್ಚುತ್ತನ್, ಕೆ.ಡಿ. ಕೃಷ್ಣ, ಸುನಿಲ್ ಅವರುಗಳನ್ನು ಆಯ್ಕೆ ಮಾಡಲಾಯಿತು.
9 ಸದಸ್ಯರುಗಳನ್ನು ಸಲಹಾ ಸಮಿತಿ ಸದಸ್ಯರನ್ನಾಗಿ, 31 ನಿರ್ದೇಶಕರುಗಳಾಗಿ ಮತ್ತು ಸಂಜೀವ ಅವರನ್ನು ಕಾನೂನು ಸಲಹೆಗಾರರಾಗಿ ಆಯ್ಕೆ ಮಾಡಿಕೊಳ್ಳಲಾಯಿತು. ಹೊಸದಾಗಿ ಸದಸ್ಯತ್ವ ಪಡೆಯುವವರು 9449260053, 9448331339 ಸಂಪರ್ಕಿಸುವಂತೆ ಸಭೆಯಲ್ಲಿ ಮನವಿ ಮಾಡಿಕೊಳ್ಳಲಾಯಿತು.