ಬೆಂಗಳೂರು, ಜ. 16: ಡಿವೈಎಸ್‍ಪಿ ಕೊಡಗಿನ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಸಿಬಿಐ ತನಿಖೆ ನಡೆಯುತ್ತಿದ್ದರೆ, ರಾಜ್ಯ ಸರ್ಕಾರದ ಏಕ ಆಯೋಗದ ನ್ಯಾಯಾಂಗ ತನಿಖೆಯೂ ಮುಂದುವರೆದಿದೆ.ನಿವೃತ್ತ ನ್ಯಾಯಾಧೀಶ ಕೆ.ಎನ್. ಕೇಶವ ನಾರಾಯಣ ಆಯೋಗದ ಈ ತನಿಖಾ ಅವಧಿಯನ್ನು ರಾಜ್ಯ ಸರ್ಕಾರವು ಫೆ. 12ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಜ. 16ಕ್ಕೆ ಅವಧಿ ನೀಡಲಾಗಿತ್ತು. ರಾಜ್ಯ ಗೃಹ ಖಾತೆಯ ಅಧೀನ ಕಾರ್ಯದರ್ಶಿಯವರು ಇಂದು ಆದೇಶ ಹೊರಡಿಸಿದ್ದಾರೆ.