ಯುವ ಕಾಂಗ್ರೆಸ್ ಪ್ರತಿಕ್ರಿಯೆ

ಸೋಮವಾರಪೇಟೆ, ಜ. 17: ಜೆಡಿಎಸ್‍ನ ಮುಖಂಡರು ಸಾಮೂಹಿ ಕವಾಗಿ ಪಕ್ಷ ತೊರೆಯುತ್ತಿರುವದರಿಂದ ಸೋಲಿನ ಭೀತಿ ಎದುರಿಸುತ್ತಿರುವ ಜೆಡಿಎಸ್, ಕಾಂಗ್ರೆಸ್ ಪಕ್ಷದ ಮೇಲೆ ವೃಥಾ ಆರೋಪ ಮಾಡುತ್ತಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಹಾನಗಲ್ ಹೇಳಿದ್ದಾರೆ.

ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯ ಮಂತ್ರಿಗಳು ರಾಜ್ಯಾದ್ಯಂತ ಪ್ರವಾಸ ಮಾಡಿ ಸಾಧನಾ ಸಮಾವೇಶವನ್ನು ಆಯೋಜಿಸುವ ಮೂಲಕ ಜನತೆಗೆ ಸರ್ಕಾರದ ಸಾಧನೆಗಳನ್ನು ತಿಳಿಸಲು ಮುಂದಾಗಿದ್ದಾರೆ ಎಂದರು. ಇದನ್ನು ಸಹಿಸದ ಜೆಡಿಎಸ್ ವಕ್ತಾರ ಕಾಟ್ನಮನೆ ವಿಠಲ್‍ಗೌಡ ಹಾಗೂ ಪ್ರಮುಖರು, ಕಾಂಗ್ರೆಸ್‍ನವರು ಸಾಧನಾ ಸಮಾವೇಶಕ್ಕೆ ಹಣ ಕೊಟ್ಟು ಜನರನ್ನು ಎಂದಿರುವದು ಕರೆತಂದಿದ್ದಾರೆ ಸರಿಯಲ್ಲ ಎಂದರು. ಕಾಟ್ನಮನೆ ವಿಠಲ್‍ರವರು ಸಂಚರಿಸುವ ರಸ್ತೆಯು ಬೇಳೂರು ಗ್ರಾಪಂ ವ್ಯಾಪ್ತಿಗೆ ಸೇರಿದ್ದು ಇದೇ ರಸ್ತೆಗೆ ಮುಖ್ಯಮಂತ್ರಿಗಳ ಪ್ಯಾಕೇಜ್‍ನಡಿ ರೂ. 5 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ ಮಾಡಿರುವದು ಅಭಿವೃದ್ಧಿಯಲ್ಲವೇ? ಎಂದು ಪ್ರಶ್ನಿಸಿದರು. ತಾಲೂಕು ಪಂಚಾಯಿತಿ ಸದಸ್ಯ ಬಿ.ಬಿ. ಸತೀಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಸಾಧನೆ ಯಿಂದಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ 5-6 ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ ಎಂದರು.

ಗೋಷ್ಠಿಯಲ್ಲಿ ರಾಹುಲ್ ಗಾಂಧಿ ಬ್ರಿಗೇಡ್ ಅಧ್ಯಕ್ಷ ಚೇತನ್, ಯುವ ಘಟಕದ ನಗರ ಅಧ್ಯಕ್ಷ ಎಸ್.ಕೆ. ವಿನಯ್ ಉಪಸ್ಥಿತರಿದ್ದರು.