ಸೋಮವಾರಪೇಟೆ, ಜ. 16: ಬೆಂಗಳೂರಿನ ಕೆ.ಆರ್.ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಿ.ಟಿ.ಕುಶಾಲಪ್ಪ ಅವರು ಡಾ.ಅರವಿಂದಕುಮಾರ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಆವಣಿ: “ಇಟ್ಸ್ ಟೆಂಪಲ್ ಅಂಡ್ ಕಲ್ಚರ್” ಎಂಬ ಮಹಾಪ್ರಬಂಧಕ್ಕೆ ಕುಪ್ಪಂನ ದ್ರಾವಿಡ ವಿಶ್ವವಿದ್ಯಾನಿಲಯವು ಪಿಎಚ್‍ಡಿ ಪದವಿ ನೀಡಿ ಗೌರವಿಸಿದೆ. ಇವರು ಮೂಲತಃ ಕೊತ್ತನಳ್ಳಿ ಗ್ರಾಮದ ಕುಡಿಗಾಣದವರಾಗಿದ್ದಾರೆ.