ವೀರಾಜಪೇಟೆ, ಜ. 16: ಕೊಡಗಿನ ಕಾಂಗ್ರೆಸ್ ಮುಖಂಡ ಬಿ.ಟಿ. ಪ್ರದೀಪ್ ಸ್ಮರಾಣಾರ್ಥ ಇಂದು ಸಾರ್ವಜನಿಕರು ಹಾಗೂ ದಿ. ಪ್ರದೀಪ್ ಅವರ ಸ್ನೇಹಿತರ ಬಳಗದಿಂದ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಹಣ್ಣು ಹಂಪಲು ವಿತರಣಾ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ನಾಮ ನಿರ್ದೇಶನ ಸದಸ್ಯರುಗಳಾದ ಡಿ.ಪಿ. ರಾಜೇಶ್, ಪಟ್ಟಡ ರಂಜಿ ಪೂಣಚ್ಚ, ಕೆ.ಎನ್. ಮಹಮ್ಮದ್‍ರಾಫಿ, ಹಿರಿಯ ಮಾಜಿ ಸದಸ್ಯ ಸಿ.ಕೆ. ಪ್ರಥ್ವಿನಾಥ್, ಮಂಡೇಟಿರ ಅನಿಲ್, ಗುಂಡಿಗೆರೆ ಫಾರೂಖ್, ನರೇಂದ್ರ ಕಾಮತ್, ಶೀಬಾ ಪ್ರಥ್ವಿನಾಥ್ ಮತ್ತಿತರರು ಹಾಜರಿದ್ದರು.