ಸಿದ್ದಾಪುರ, ಜ. 17: ಸುನ್ನಿ ಯುವಜನ ಸಂಘದ ಯೂತ್ ಹೆಲ್ತ್ ಕೇರ್ ವಾಟ್ಸಪ್ ಗ್ರೂಪ್ ಸದಸ್ಯರುಗಳಿಂದ ಸಿದ್ದಾಪುರ ಸರಕಾರಿ ಆಸ್ಪತ್ರೆಯ ಆವರಣ ಸ್ವಚ್ಛತಾ ಕಾರ್ಯ ಮಾಡಲಾಯಿತು. ಸಂಘದ ಅಧ್ಯಕ್ಷ ಕೆ.ಎಂ. ಹಂಸ ಮೌಲವಿ ಮಾತನಾಡಿ, ಗುಯ್ಯ ಗ್ರಾಮದಲ್ಲಿ ಸುನ್ನಿ ಯುವಜನ ಸಂಘದ ಸಹಕಾರದೊಂದಿಗೆ ಯೂತ್ ಹೆಲ್ತ್ ಕೇರ್ ವಾಟ್ಸಪ್ ಗ್ರೂಪ್ ಪ್ರಾರಂಭವಾಗಿ ಎರಡು ತಿಂಗಳಲ್ಲಿ ಕಡು ಬಡ ರೋಗಿಗಳಿಗೆ ಧನ ಸಹಾಯ, ಸ್ವಚ್ಛತಾ ಆಂದೋಲನ ಸೇರಿದಂತೆ ಹಲವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮುನ್ನಡೆಯುತ್ತಿದೆ ಎಂದರು.

ಈ ಸಂದರ್ಭ ಗ್ರೂಪ್‍ನ ಪ್ರಮುಖರಾದ ಜಾಫರ್, ಬಾವಾ, ಹಂಸ ಸೇರಿದಂತೆ ಮತ್ತಿತರರು ಇದ್ದರು.