ನಾಪೆÇೀಕ್ಲು, ಜ. 17: ನಾಪೆÇೀಕ್ಲು ವಿವಿಧೆಡೆ ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಚ್ಛತಾ ಆಂದೋಲನ ನಡೆಸಲಾಯಿತು.ಪಾಡಿ ಇಗ್ಗುತ್ತಪ್ಪ ದೇವಳ: ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಭಾಗಮಂಡಲ ಸ್ಫೂರ್ತಿ ಜ್ಞಾನ ವಿಕಾಶ ಕೇಂದ್ರ, ಕಕ್ಕಬೆ ಒಕ್ಕೂಟದ ಸದಸ್ಯರಿಂದ ಸ್ವಚ್ಛತಾ ಆಂದೋಲನ ಕೈಗೊಳ್ಳಲಾಯಿತು.ಕಾರುಗುಂದ ದೇವಸ್ಥಾನ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭಾಗಮಂಡಲ ವಲಯದ ಕಾರುಗುಂದ ಒಕ್ಕೂಟದ ವತಿಯಿಂದ ಕಾರುಗುಂದ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ. ಅಶೋಕ್, ಸಂಘದ ತಾಲೂಕು ಯೋಜನಾಧಿಕಾರಿ ಸದಾಶಿವ, ಒಕ್ಕೂಟದ ಅಧ್ಯಕ್ಷೆ ಇಂದಿರಾ, ವಲಯ ಮೇಲ್ವಿಚಾರಕ ಚೇತನ್, ಸೇವಾ ಪ್ರತಿನಿಧಿ ಲಕ್ಷ್ಮಿ, ಸದಸ್ಯರು ಇದ್ದರು.ಬೆಟ್ಟಗೇರಿ ಶ್ರೀ ಭಗವತಿ ದೇವಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭಾಗಮಂಡಲ, ಬೆಟ್ಟಗೇರಿ ಒಕ್ಕೂಟದ ಸದಸ್ಯರಿಂದ ಬೆಟ್ಟಗೇರಿ ಶ್ರೀ ಭಗವತಿ ದೇವಳದ ಆವರಣದಲ್ಲಿ ಸ್ವಚ್ಛತಾ ಆಂದೋಲನ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕ ಚೇತನ್, ಸೇವಾ ಪ್ರತಿನಿಧಿ ಗೌರಮ್ಮ, ದೇವಳದ ಆಡಳಿತ ಮಂಡಳಿ ಸದಸ್ಯರು ಮತ್ತಿತರರು ಇದ್ದರು.