ಮಡಿಕೇರಿ, ಜ. 15 : ಕೊಡಗಿನ ಸಜ್ಜನ ರಾಜಕಾರಣಿ ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ದಿ. ಬಿ.ಟಿ.ಪ್ರದೀಪ್ ಅವರ ಮೊದಲನೇ ವರ್ಷದ ಪುಣ್ಯಸ್ಮರಣೆ ಯನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಡಲಾಯಿತು. ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಸೇರಿದಂತೆ ಪಕ್ಷದ ಪ್ರಮುಖರು ಬಿ.ಟಿ. ಪ್ರದೀಪ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಮಾತನಾಡಿದ ಶಿವು ಮಾದಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ, ಡಿ.ಸಿ.ಸಿ. ಸದಸ್ಯರಾದ ಎಂ.ಈ. ಹನೀಫ್, ಪುಲಿಯಂಡ ಜಗದೀಶ್, ಗ್ರಾ.ಪಂ ಸದಸ್ಯರಾದ ಕೆ.ಎ.ಆದಂ, ಬಿ.ಬಿ. ಜಯೇಂದ್ರ, ಎಂ.ಎಂ. ಹನೀಫ್, ಎಂ. ಸುರೇಶ್, ಸುದಯ್ ನಾಣಯ್ಯ, ಎಸ್.ಹೆಚ್. ಅಬ್ಬುಬಕರ್, ಅಭಿನ್, ಕಿಶು ಬೋಪಯ್ಯ ಮತ್ತಿತರ ಪ್ರಮುಖರು ಹಾಜರಿದ್ದರು.