ಸೋಮವಾರಪೇಟೆ, ಜ. 15: ಸೋಮವಾರಪೇಟೆಯಲ್ಲಿಂದು ಕೇಸರಿ ಪಕ್ಷದ ಕಲರವ ಮುಗಿಲುಮುಟ್ಟಿತ್ತು. ಹಿಂದೆಂದಿಗಿಂತಲೂ ಹೆಚ್ಚಿನ ಉತ್ಸಾಹದಲ್ಲಿ ಕಾರ್ಯಕರ್ತರು ಹರ್ಷೊ ದ್ಗಾರದೊಂದಿಗೆ ಭಾಗವಹಿಸಿದ್ದರು. ಅಭೂತಪೂರ್ವ ಮೆರವಣಿಗೆ ನಂತರ ಇಲ್ಲಿನ ಜೇಸೀ ವೇದಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ತೊರೆದು 700ಕ್ಕೂ ಅಧಿಕ ಮಂದಿ ಕಾರ್ಯಕರ್ತರು ಬಿಜೆಪಿ ಸೇರಿದರು.
ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾದ ವತಿಯಿಂದ ಇಲ್ಲಿನ ಜೇಸೀ ವೇದಿಕೆಯಲ್ಲಿ ಆಯೋಜಿಸಿದ್ದ ಯುವ ಸಮಾವೇಶ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮದ ಅಂಗವಾಗಿ ಇಂದು ಬೆಳಿಗ್ಗೆ ಇಲ್ಲಿನ ವಿವೇಕಾದಂದ ವೃತ್ತದಿಂದ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಇದಕ್ಕೂ ಮುನ್ನ ಶ್ರೀ ಮುತ್ತಪ್ಪ ಮತ್ತು ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಪ್ರತಾಪ್ ಸಿಂಹ, ಜಿಲ್ಲಾಧ್ಯಕ್ಷ ಕಾಳನ ರವಿ, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸೇರಿದಂತೆ ಸಾವಿರಾರು ಮಂದಿ ಯುವ ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಭಾರತ್ ಮಾತಾ ಕೀ ಜೈ ಘೋಷಣೆಯೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.
ಇದರೊಂದಿಗೆ ಜಾತ್ಯತೀತ ಜನತಾದಳ ಪಕ್ಷದಿಂದ ಹೊರ ಬಂದಿರುವ ಪಕ್ಷದ ಮಾಜೀ ಜಿಲ್ಲಾಧ್ಯಕ್ಷ ಎಸ್.ಬಿ. ಭರತ್ಕುಮಾರ್, ಉಸ್ತುವಾರಿ ವಿ.ಎಂ. ವಿಜಯ, ಯುವ ಜೆಡಿಎಸ್ ಮಾಜೀ ಅಧ್ಯಕ್ಷ ಅಜೀಶ್ಕುಮಾರ್, ಹಿಂದುಳಿದ ವರ್ಗ ಘಟಕದ ಯೋಗೇಶ್ಕುಮಾರ್, ಎಸ್ಸಿ ಎಸ್ಟಿ ಘಟಕದ ರಾಮಕೃಷ್ಣ, ಜಿ.ಪಂ. ಮಾಜೀ ಸದಸ್ಯೆ ಎನ್.ಎಸ್. ಗೀತಾ ಸೇರಿದಂತೆ 400ಕ್ಕೂ ಅಧಿಕ ಮಂದಿ ಪ್ರತ್ಯೇಕ ಮೆರವಣಿಗೆ ನಡೆಸುವ ಮೂಲಕ ತಮ್ಮ ಬಣದ ಶಕ್ತಿ ಪ್ರದರ್ಶನ ಮಾಡಿ ಜೆಡಿಎಸ್ ಪಕ್ಷಕ್ಕೆ ಟಾಂಗ್ ನೀಡಿದರು.
ಇಲ್ಲಿನ ಜೇಸೀ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ವಿವಿಧ ಪಕ್ಷದ ಮುಖಂಡರನ್ನು ಮಾಜೀ ಮುಖ್ಯಮಂತ್ರಿ ಸದಾನಂದಗೌಡ, ಪಕ್ಷದ ರಾಜ್ಯ ಕಾರ್ಯದರ್ಶಿ ಸಿ.ಟಿ. ರವಿ, ಶಾಸಕದ್ವಯರಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಎಂಎಲ್ಸಿ ಸುನಿಲ್ ಸುಬ್ರಮಣಿ,
(ಮೊದಲ ಪುಟದಿಂದ) ಪಕ್ಷದ ಜಿಲ್ಲಾಧ್ಯಕ್ಷ ಭಾರತೀಶ್, ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ ಸೇರಿದಂತೆ ಇತರರು ಪಕ್ಷಕ್ಕೆ ಬರಮಾಡಿಕೊಂಡರು.
ವಿವಿಧ ಗ್ರಾ.ಪಂ. ಸದಸ್ಯರುಗಳಾದ ಪಾಂಚಾಲಿ, ಶಿವದಾಸ್, ಗೋಪಾಲ್, ಕುಮಾರಿ, ಲಕ್ಷ್ಮಮ್ಮ, ಆನಂದ್, ಸುರೇಶ್, ವಾಸು, ರಮಣಿ, ಯಶೋದ, ಗ್ರಾ.ಪಂ. ಮಾಜೀ ಅಧ್ಯಕ್ಷರುಗಳಾದ ರಾಜಶೇಖರ್, ಟಿ.ಕೆ. ಲೋಕಾನಂದ್, ಕಾವೇರಮ್ಮ, ಧರ್ಮಾಚಾರಿ, ವಿನಯ್, ನಾಗರಾಜ್, ಶ್ರೀನಿವಾಸ್, ಜೆಡಿಎಸ್ ನಗರ ಕಾರ್ಯದರ್ಶಿ ಧನು, ನಗರಾಧ್ಯಕ್ಷ ಚಂದ್ರು, ಸುಂಟಿಕೊಪ್ಪದ ಪೊನ್ನಪ್ಪ ಕ್ಲೈವ, ಕಾಂಗ್ರೆಸ್ ಮಾಜೀ ನಗರಾಧ್ಯಕ್ಷ ರಮೇಶ್, ಹಿಂದುಳಿದ ವರ್ಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಗಿರಿಧರ್ ಆಚಾರ್ಯ, ದಾಕ್ಷಾಯಿಣಿ, ಜನಾರ್ಧನ್, ಅವರುಗಳ ನೇತೃತ್ವದಲ್ಲಿ 700ಕ್ಕೂ ಅಧಿಕ ಮಂದಿ ಜೆಡಿಎಸ್ ಹಾಗೂ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು.
ಸುಮಾರು 2,500ಕ್ಕೂ ಅಧಿಕ ಮಂದಿ ಕಾರ್ಯಕರ್ತರಿಂದ ನಡೆದ ಬಿಜೆಪಿ ಯುವ ಮೋರ್ಚಾ ಮೆರವಣಿಗೆಯಲ್ಲಿ ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಶಾಸಕರ ಶಕ್ತಿ ಪ್ರದರ್ಶನಕ್ಕೆ ವೇದಿಕೆ: ಜೆಡಿಎಸ್ ಮುಖಂಡರಾದ ವಿ.ಎಂ. ವಿಜಯ ಮತ್ತು ಎಸ್.ಬಿ. ಭರತ್ಕುಮಾರ್ ಅವರುಗಳ ಪಕ್ಷ ಸೇರ್ಪಡೆ ಹಾಗೂ ಹಾಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಟಿಕೇಟ್ ನೀಡದಂತೆ.