ಮಡಿಕೇರಿ, ಜ. 9: ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯಿ) ತರಬೇತಿ ಕೇಂದ್ರ ಮಡಿಕೇರಿಯ ಬಾಲಕಿಯರ ಕ್ರೀಡಾ ಹಾಸ್ಟೆಲ್‍ಗೆ ಮಡಿಕೇರಿಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಿದೆ.

ಹಾಕಿಗೆ ತಾ. 23, 24 ರಂದು ಸಾಯಿ ಹಾಕಿ ಟರ್ಫ್ ಮಯದಾನ, ರೇಸ್‍ಕೋರ್ಸ್ ರಸ್ತೆ, ಮಡಿಕೇರಿಯಲ್ಲಿ ಬೆಳಿಗ್ಗೆ 10 ಗಂಟೆಗೆ. ಅಥ್ಲೆಟಿಕ್‍ಗೆ ತಾ. 23 ರಂದು ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ (ಮ್ಯಾನ್ಸ್ ಕಾಂಪೌಂಡ್) ಬೆಳಿಗ್ಗೆ 10 ಗಂಟೆಗೆ ಆಯ್ಕೆ ನಡೆಯಲಿದೆ.

ಈ ಸಂದರ್ಭ ಬಾಲಕಿಯರಿಗೆ ಹಾಕಿ ಮತ್ತು ಅಥ್ಲೆಟಿಕ್‍ಗೆ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. 10 ರಿಂದ 18 ವರ್ಷ ಪ್ರಾಯದೊಳಗಿನ ಬಾಲಕಿಯರು ಜಿಲ್ಲಾ, ವಿಭಾಗ ಮಟ್ಟದಲ್ಲಿ ಪದಕ ವಿಜೇತರು, ರಾಜ್ಯ ಹಾಗೂ ಅದಕ್ಕಿಂತ ಮೇಲ್ಪಟ್ಟ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳು ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. 12 ರಿಂದ 18 ವರ್ಷ ಪ್ರಾಯದೊಳಗಿನ ಬಾಲಕಿಯರು ಜಿಲ್ಲಾಮಟ್ಟದ ಶಾಲಾ, ಸಿ.ಬಿ.ಎಸ್.ಇ. ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಹಾಗೂ ದಸರಾ ಕ್ರೀಡಾಕೂಟದಲ್ಲಿ ಪದಕ ವಿಜೇತರು, ರಾಜ್ಯ ಹಾಗೂ ಅದಕ್ಕಿಂತ ಮೇಲ್ಪಟ್ಟ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳು ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.

ಅಭ್ಯರ್ಥಿಗಳು ದಾಖಲಾತಿಯ ಮೂಲ ಪ್ರತಿಯೊಂದಿಗೆ ಒಂದು ಸೆಟ್ ಜೆರಾಕ್ಸ್ ಪ್ರತಿಯನ್ನು ತರಬೇಕು. ವೈದ್ಯಕೀಯ ಅರ್ಹತಾ ಪತ್ರ ವೈದ್ಯಾಧಿಕಾರಿಯವರಿಂದ. ಕ್ರೀಡಾ ಸಾಧನೆಯ ಸರ್ಟಿಫಿಕೇಟ್ (ಜಿಲ್ಲಾ ವಿಭಾಗ, ರಾಜ್ಯ ಹಾಗೂ ಅದಕ್ಕಿಂತ ಮೇಲ್ಪಟ್ಟ ಸ್ಪರ್ಧೆಯಲ್ಲಿ). ಜನ್ಮ ದಿನಾಂಕ ಪ್ರಮಾಣ ಪತ್ರ (ಜನನ-ಮರಣ ನೋಂದಣಿ ಅಧಿಕಾರಿಗಳಿಂದ), ಇತ್ತೀಚಿನ 2 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ. ವಿಳಾಸ ದೃಢೀಕರಣಗೊಳಿಸಲು ಪಡಿತರ ಚೀಟಿ ಅಥವಾ ಚುನಾವಣೆ ಚೀಟಿ, ಅಥವಾ ಆಧಾರ್ ಕಾರ್ಡ್ ತರಲು ಕೋರಲಾಗಿದೆ ಎಂದು ಸಾಯಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಎನ್.ಎಸ್. ರವಿ ತಿಳಿಸಿದ್ದಾರೆ.