ಸುಂಟಿಕೊಪ್ಪ, ಜ. 8 : ಚಿಕ್ಲಿಹೊಳೆ ಸಮೀಪದ ಕಟ್ಟೆ ಹಾಡಿಯ ಗಿರಿಜನ 10 ಕುಟುಂಬದವರಿಗೆ ಐಟಿಡಿಪಿ ಇಲಾಖೆಯಿಂದ ನಿರ್ಮಿಸಲಾದ ಮನೆಗಳಿಗೆ ಹೆಚ್ಚುವರಿ ಕೊಠಡಿಗೆ ಮೇಲ್ಛಾವಣಿ ಶೀಟ್‍ನ್ನು ಜಿ. ಪಂ. ಸದಸ್ಯ ಪಿ.ಎಂ.ಲತೀಫ್ ಸ್ವಂತ ಖರ್ಚಿನಿಂದ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಸದಸ್ಯ ಆರ್.ಕೆ.ಚಂದ್ರು ಹಾಗೂ ಹಾಡಿಯ ನಿವಾಸಿಗಳು ಹಾಜರಿದ್ದರು.