ಗುಡ್ಡೆಹೊಸುರು, ಜ. 8 : ಇಲ್ಲಿನ ಸರಕಾರಿ ಶಾಲಾ ಆವರಣದಲ್ಲಿ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತರಾದ ಶಿಕ್ಷಕರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಲೋಕೇಶ್, ಪ್ರೇಮಜಾ, ಉಮಾದೇವಿ, ಚಂದ್ರಮತಿ ಯವರನ್ನು ಸನ್ಮಾನಿಸಿ ಗೌರವಿಸ ಲಾಯಿತು. ಈ ಸಂಧರ್ಭ ಕಾರ್ಯಕ್ರಮದಲ್ಲಿ ಮಖ್ಯ ಅತಿಥಿ ಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ
ನಾಗರಾಜಯ್ಯ, ಮತ್ತು ಶಿಕ್ಷಣ ಸಂಯೋಜಕರಾದ ಕೆ. ಮೂರ್ತಿ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಕಾರ್ಯದರ್ಶಿ ಬಸವರಾಜ್,ಯೋಗೇಶ್,ಸುರೇಶ್ ಮತ್ತು ಸಿ.ಆರ್.ಪಿ. ಸತ್ಯನಾರಾಯಣ, ಇ. ಆರ್. ಟಿ. ವೆಂಕಟೇಶ್, ಮುಖ್ಯ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಚ್. ಆರ್. ಕುಮಾರ್ ಅವರು ಹಾಜರಿದ್ದರು.
ಗುಡ್ಡೆಹೊಸುರು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಣ್ಣಸ್ವಾಮಿ ಆಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಸತ್ಯನಾರಾಯಣ ಸ್ವಾಗತಿಸಿದರು. ಶಿಕ್ಷಕಿ ಕಾರ್ಯ ಕ್ರಮ ನಿರೂಪಿಸಿ, ಕವಿತಾ ವಂದಿಸಿದರು.