ಮೂರ್ನಾಡು, ಜ. 8: ಹಿರಿಯರು ಹಾಗೂ ಜಿಲ್ಲಾ ಬಲಿಜ ಸಮಾಜ ಖಜಾಂಚಿ ಟಿ.ಎನ್.ಲೋಕನಾಥ್ ಅವರು ಬಲಿಜ ಗಣತಿ ಪುಸ್ತಕವನ್ನು ಬಿಡುಗಡೆ ಮಾಡುವ ಮೂಲಕ ಮಡಿಕೇರಿ ತಾಲೂಕು ಬಲಿಜ ಗಣತಿ ಅಭಿಯಾನಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಮೂರ್ನಾಡು ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಸಮುದಾಯ ಭವನದಲ್ಲಿ ಮಡಿಕೇರಿ ತಾಲೂಕು ಬಲಿಜ ಸಮಾಜ ಅಧ್ಯಕ್ಷೆ ಮೀನಾಕ್ಷಿ ಕೇಶವ್ ಅಧ್ಯಕ್ಷತೆಯಲ್ಲಿ ಬಲಿಜ ಜನಾಂಗದ ಗುರು ಕೈವಾರ ತಾತಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಜಿಲ್ಲಾ ಬಲಿಜ ಸಮಾಜದ ಅಧ್ಯಕ್ಷ ಟಿ. ಎಲ್. ಶ್ರೀನಿವಾಸ್ ಮಾತನಾಡಿ ಪ್ರಧಾನ ಕಾರ್ಯದರ್ಶಿ ಟಿ.ವಿ.ಲೋಕೇಶ್, ಟಿ.ಎನ್.ರಮೇಶ್ ನಾಯ್ಡು, ಕಡಗದಾಳು ಸುಶೀಲ, ಟಿ.ಎನ್.ಜಯಲಕ್ಷ್ಮಿ, ಟಿ.ಎಲ್.ಪಾರ್ವತಿ, ನಾಪೆÇೀಕ್ಲು ಭವಾನಿ, ಯಶ್‍ವಂತ್, ಟಿ.ಜಿ.ಶ್ರೀನಿವಾಸ್, ಟಿ.ಜಿ.ರಾಮಚಂದ್ರ, ಹಿರಿಯರಾದ ಮೂರ್ನಾಡು ಗಣೇಶ್‍ನಾಯ್ಡು, ನಾಗೇಶ್ ನಾಯ್ಡು, ಟಿ.ಎಸ್.ವೆಂಕಟೇಶ್, ನಿರ್ಮಲಾ, ಸುಮಂತ್, ಬಾಲಕೃಷ್ಣ, ಕೇಶವ್, ಮುಂತಾದವರು ಇದ್ದರು.