ಸಿದ್ದಾಪುರ, ಜ. 8 : ಸಿದ್ದಾಪುರ ಸಮೀಪದ ಕೂಡುಗದ್ದೆಯ ಶ್ರೀ ಅಯ್ಯಪ್ಪ ದೇವಾಲಯದ ವಾರ್ಷಿಕೋತ್ಸವ ವಿಜ್ರಂಭಣೆಯಿಂದ ನಡೆಯಿತ್ತು. ಕೂಡುಗದ್ದೆಯ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ಬೆಳ್ಳಗಿನಿಂದ ವಿವಿಧ ಪೂಜಾ ಕೈಕರ್ಯಗಳು ನಡೆದವು ಮಹಾ ಪೂಜೆಯ ಬಳಿಕ ಚಂಡೆ ವಾದ್ಯದೊಂದಿಗೆ ಶ್ರೀ ಅಯ್ಯಪ್ಪ ದೇವಾಲಯದಿಂದ ಗುಹ್ಯ ಗ್ರಾಮದ ಭದ್ರಕಾಳಿ ದೇವಾಲಯದವರೆಗೆ ಮೆರವಣಿಗೆ ನಡೆಯಿತು.