ಮಡಿಕೇರಿ, ಜ. 8: ಮಡಿಕೇರಿ ಮಹದೇವಪೇಟೆಯಲ್ಲಿರುವ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಂಗ ಮಹಿಳಾ ಸಮಾಜದ 23ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಇತ್ತೀಚೆಗೆ ನಡೆಯಿತು.
ಮಂಗಳೂರಿನ ಬೀರುಂಬಾ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷೆ ಶಾಂತಾ ರವೀಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೈಲಾದ ಸಹಕಾರವನ್ನು ಸರ್ವರ ಸಹಕಾರ ದಿಂದ ಸಮಾಜವು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸಮಾಜದ ಅಧ್ಯಕ್ಷೆ ಭಾರತಿ ರಮೇಶ್ ಅವರು ಸಮಾಜದ ಕಿರುಪರಿಚಯ ದೊಂದಿಗೆ ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಭಗವತಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಮತಿಯಾದವ್ ಹಾಗೂ ಶ್ರೀ ಚೌಡೇಶ್ವರಿ ಮಹಿಳಾ ವೇದಿಕೆ ಅಧ್ಯಕ್ಷೆ ವಿಜಯಲಕ್ಷ್ಮಿ ವೆಂಕಟಾಚಲಯ ಅವರು ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ್ದ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಂಗ ಸಂಘದ ಅಧ್ಯಕ್ಷ ಕೆ.ಎಸ್. ಗಜಾನನ, ಪೂಜಾ ಹಾಗೂ ಭೋಜನ ಸೇವಾರ್ಥದಾರರಾದ ಲತಾ ಲೋಹಿತ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಅಲ್ಲದೆ ಡಾ.ದರ್ಶನ್ ದಿವಾಕರ್, ಎಂ.ಎಸ್. ನಲ್ಲಿ ಉತ್ತಮ ಅಂಕಗಳಿಸಿ 6ನೇ ರ್ಯಾಂಕ್ ಪಡೆದ ಕೃತಿ ಕೆಂಚೆಟ್ಟಿ ಯವರಿಗೆ ಅವರ ಅನುಪಸ್ಥಿತಿಯಲ್ಲಿ ಅವರ ಪೋಷಕರನ್ನು ಗೌರವಿಸ ಲಾಯಿತು.
ಶಿವಮೊಗ್ಗದಿಂದ ಬಂದಿದ್ದ ಹರಿಕಥಾ ವಿದ್ವಾನ್, ನಂದಿ ಪ್ರಶಸ್ತಿ ವಿಜೇತ ಎಸ್.ಎಸ್. ಶಿವಾನಂದ ಸ್ವಾಮಿ ಅವರಿಂದ ಹರಿಕಥೆ ನಡೆಯಿತು. ಆಟೋಟಗಳಲ್ಲಿ ಭಾಗವಹಿಸಿದ್ದ ಮಹಿಳೆಯರಿಗೂ, ಮಕ್ಕಳಿಗೂ ಬಹುಮಾನ ವಿತರಣೆ ಮಾಡಲಾಯಿತು. ನಂದಿನಿ ಗಣೇಶ್, ಶಶಿಕಲಾ ಲೋಕೇಶ್, ಇಂದ್ರ ಜಯರಾಂ ಪ್ರಾರ್ಥಿಸಿ, ಜಯಶ್ರಿ ನಾಗೇಶ್ ಗವಿ ಸ್ವಾಗತಿಸಿದರು. ಶಶಿಕಲಾ ಲೊಕೇಶ್ ವಂದಿಸಿದರು. ನಂದಿನಿ ಗಣೇಶ್, ಭಾಗ್ಯ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.
ಸರೋಜರಾಜು, ಲಲಿತಾ ಸುರೇಶ್, ಪೂರ್ಣಿಮಾ ಜಗದೀಶ್, ಭಾರತಿ ಸುಬ್ರಮಣ್ಯ, ಪದ್ಮಾ ಮೋಹನ್ ಕಾರ್ಯಕ್ರಮದಲ್ಲಿ ಸಹಕರಿಸಿದರು. ನಂತರ ನಡೆದ ಸಾಂಸ್ಕøತಿಕ ಕಾರ್ಯಕ್ರಮ ಎಲ್ಲರನ್ನು ರಂಜಿಸಿತು.