ಮಡಿಕೇರಿ, ಜ. 8: ಮಡಿಕೇರಿಯಿಂದ ಆರೆಂಟು ಕಿ. ಮೀ. ದೂರದ ಹೆದ್ದಾರಿಗೆ ಹೊಂದಿ ಕೊಂಡಂತೆ ಕಾಟಕೇರಿ ಸರಕಾರಿ ಶಾಲೆಯು ಇದ್ದು, ಈ ಆವರಣ ದೊಳಗೆ ಚಿಣ್ಣರಿಗಾಗಿ ಸುಂದರ ಅಂಗನವಾಡಿ ಕೂಡ ನಿತ್ಯ ನಡೆಯು ತ್ತಿದೆ. ಆದರೆ, ಈ ಶಾಲೆಯು ನಮ್ಮ ಸರಕಾರಿ ಶಿಕ್ಷಣ ವ್ಯವಸ್ಥೆಗೆ ಕೈಗನ್ನಡಿಯಂತಿದೆ.

ಈಚೆಗೆ ರಾಜ್ಯ ಶಿಕ್ಷಣ ಸಚಿವರು ಕೂಡ ಸಮಾರಂಭವೊಂದರಲ್ಲಿ ಹೇಳಿಕೆ ನೀಡಿ, ಪ್ರತಿ ಹೋಬಳಿಗೆ ಒಂದರಂತೆ ಮುಂದಿನ ದಿನಗಳಲ್ಲಿ ಸರಕಾರ ಕನ್ನಡದೊಂದಿಗೆ ಆಂಗ್ಲ ಶಿಕ್ಷಣಕ್ಕೂ ಒತ್ತು ನೀಡುವ ನಿಟ್ಟಿನಲ್ಲಿ ಹೊಸ ಶಾಲೆಗಳನ್ನು ತೆರೆಯುವದಾಗಿ ಘೋಷಿಸಿದ್ದಾರೆ. ಎಲ್ಲೆಡೆ ನಡೆಯುತ್ತಿ

ರುವ ಕನ್ನಡ ಸಮ್ಮೇಳನಗಳಲ್ಲಿಯೂ ಶಿಕ್ಷಣಕ್ಕೆ ಆಗ್ರಹ ಪೂರ್ವಕ ನಿರ್ಣಯ ಗಳು ಅಂಗೀಕರಿಸ್ಪಡುತ್ತಿವೆ.

ಈ ಎಲ್ಲಾ ಬೆಳವಣಿಗೆ ನಡುವೆಯೂ ಬಹಳಷ್ಟು ಸರಕಾರಿ ಶಿಕ್ಷಣ ಸಂಸ್ಥೆಗಳು ಅಥವಾ ಶಾಲೆಗಳು ಪ್ರಾಥಮಿಕ ಹಂತದಲ್ಲೇ ಬಾಗಿಲು ಮುಚ್ಚಿಕೊಳ್ಳುತ್ತಿರುವ ಆತಂಕಕಾರಿ ಬೆಳವಣಿಗೆಯೂ ಎದುರಾಗುತ್ತಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಈಗಾಗಲೇ ಮಡಿಕೇರಿ ತಾಲೂಕಿನ ದೇವಸ್ತೂರು, ವಣಚಲು, ಹಮ್ಮಿಯಾಲ, ಭಗವತಿನಗರ ಮುಂತಾದೆಡೆಗಳಲ್ಲಿ ಶಾಲೆಗಳು ಮುಚ್ಚಿಹೋಗಿವೆ.

ಅದೇ ರೀತಿ ಕಾಟಕೇರಿಯಲ್ಲಿ ಶಾಲೆ ನಡೆಯುತ್ತಿದ್ದರೂ ಕಟ್ಟಡದ ಮೇಲ್ಛಾವಣಿ ಕಳಚಿ ಬೀಳ ತೊಡಗಿದೆ. ಈ ಅಪಾಯದ ನಡುವೆಯೂ ಅಲ್ಲಿ ನಿತ್ಯ ಒಂದರಿಂದ ಏಳನೇ ತರಗತಿವರೆಗಿನ ಮಕ್ಕಳು ಕಲಿಯುತ್ತಿದ್ದಾರೆ. ಈ ಮಕ್ಕಳು ಬೀಳುತ್ತಿರುವ ಮಾಡುವಿನ ಕೆಳಗಡೆಯೇ ದಿನವಿಡೀ ಮೂತ್ರ ವಿಸರ್ಜನೆ ಇತ್ಯಾದಿಗೆ ತೆರಳುತ್ತಿರು ವದು ಭಯ ಹುಟ್ಟಿಸುತ್ತಿದೆ. ಆದರೆ, ಜವಾಬ್ದಾರಿ ಹೊತ್ತವರು ಮಾತ್ರ ಅತ್ತ ತಿರುಗಿಯೂ ನೋಡದೆ, ಶಿಕ್ಷಕರ ಕೊರತೆ ನಡುವೆ ಒತ್ತಡದೊಂದಿಗೆ ಅಲ್ಲಿ ಮಕ್ಕಳನ್ನು ಗಮನಿಸುತ್ತಿರುವ ಅಧ್ಯಾಪಕರನ್ನು ಅಪಾಯ ಎದುರಾದರೆ ಹೊಣೆ ಮಾಡಿ ಅಮಾನತು ಮಾಡಿ ಬಿಡುತ್ತಾರೆ. ಅಂಥ ಅಪಾಯ ಎದುರಾಗುವ ಮುನ್ನ ಇಲಾಖೆ ಎಚ್ಚೆತ್ತುಕೊಳ್ಳ ಲೆಂದು ಆಶಿಸೋಣ.

-ಶ್ರೀಸುತ